ವೈದ್ಯರು ಹಣ ಕೇಳ್ತಾರಂತೆ ಆದ್ರೆ ಡಿಮ್ಯಾಂಡ್ ಮಾಡಲ್ವಂತೆ..!ಯಾರು ಡಾಕ್ಟರ್ ಗೊತ್ತಾ

ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದ ಸಾರ್ವಜನಿಕರು ಎದುರೇ ಹೌದು ತೆಗೆದುಕೊಳ್ಳು ತ್ತೇನೆ ಅಂತಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಾಧಾಕೃಷ್ಣ ಹೇಳಿದ್ದಾರೆ. ಬೆಳಗ್ಗೆ 11 ಗಂಟೆ ಸಭೆ ಆರಂಭವಾದಾಗ ಸಾರ್ವಜನಿಕರೊಬ್ಬರು, ಇಲ್ಲಿನ ವೈದ್ಯರು ಚಿಕಿತ್ಸೆ ನೀಡಿದ ನಂತರ ಹಣ ಕೇಳುತ್ತಾರೆ ಎಂದು ಆರೋಪ ಮಾಡಿದರು. ಇದಕ್ಕೆ ವೈದ್ಯ ರಾಧಾಕೃಷ್ಣ ಹಣ ತೆಗೆದುಕೊಳ್ಳುತ್ತೇನೆ ಆದರೆ ಡಿಮ್ಯಾಂಡ್ ಮಾಡುವುದಿಲ್ಲ ಎಂದ್ರು. ಇದಕ್ಕೆ ಪ್ರತಿಯಾಗಿ,  ಸಾರ್ವಜನಿಕರು, ಹಣ ಪಡೆಯುವುದು ತಪ್ಪು ಎಂದು ಹೇಳಿದಾಗ, ಹೌದು. ಹಣ ಪಡೆದುಕೊಳ್ಳುತ್ತೇನೆ ಏನಿವಾಗ ಎಂದು ಮರುಪ್ರಶ್ನೆ ಹಾಕಿದ ಪ್ರಸಂಗ ನಡೆಯಿತು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ವೈದ್ಯರನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯ ಪ್ರವೇಶ ಮಾಡಿದ ವೈದ್ಯಾಧಿಕಾರಿಗಳು ಇನ್ನು ಮುಂದೆ ಹಣ ಪಡೆದುಕೊಂಡರೆ, ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!