ಇಂದು ಬಾಗೇಪಲ್ಲಿ ಪುರಸಭೆಯ 13 ನೇ ವಾರ್ಡ್ ಗೆ ವನಿತಾದೇವಿ ಸೋಮಶೇಖರ್ ನಾಮಪತ್ರ ಸಲ್ಲಿಕೆ ಹರಿದುಬಂದ ಬೃಹತ್​ ಜನಸಾಗರ..!

ಬಾಗೇಪಲ್ಲಿ:ಪುರಸಭೆಯ 13 ನೇ ವಾರ್ಡ್ ಸಿಪಿಐಎಂ ಪಕ್ಷದ ಅಭ್ಯರ್ಥಿಯಾದ ವನಿತಾದೇವಿ ಸೋಮಶೇಖರ್ ಅವರು ಇಂದು ಬೃಹತ್ ಮೆರವಣಿಗೆಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ವಿಧಾನಸಭೆ ಚುನುವಾಣೆಯ ರೀತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸಿಪಿಎಂ‌ ಪಕ್ಷದ ಕಾರ್ಯಕರ್ತರು ಭಾಗಿಯಾಗಿದಿದ್ದು ವಿಶೇಷ ವಾಗಿತ್ತು.ಈ ವೇಳೆ ಜೊತೆಗಿದ್ದ ವಕೀಲರಾದ ರವಿ ರವರು ಮಾತನಾಡಿ, ನಾಮಪತ್ರ ಸಲ್ಲಿಕೆ ವೇಳೆ ಹರಿದುಬಂದಿರುವ ಬೃಹತ್​ ಜನಸಾಗರವೇ ಕಂಡು ಅತಿ ಹೆಚ್ಚು ಮತಗಳಿಂದ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಹದಿಮೂರನೆಯ ವಾರ್ಡ್ ಅಭ್ಯರ್ಥಿ ವನಿತಾದೇವಿ ಅವರು, ಇಷ್ಟೊಂದು ಜನ ಸೇರಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ನಾನು ನಂಬಿರುವ ಜನ ನನ್ನನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವುದು ಕೂಡ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಹಿರಿಯ ವಕೀಲರಾದ ಪಾತಪಾಳ್ಯ ಶ್ರೀನಿವಾಸ್ ಮುಖಂಡರಾದ ಗಂಗಾಧರ, ಭಾನುಪ್ರಕಾಶ್,ನರಸಿಂಹಪ್ಪ,ಎಂ.ಶಿವಪ್ಪ ಮುಂತಾದವರು ಭಾಗವಹಿಸಿದ್ದರು

Share Post

Leave a Reply

Your email address will not be published. Required fields are marked *

error: Content is protected !!