ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರಿಗೆ ಆಹ್ವಾನ !

ಭಾರತೀಯ ವಾಯು ಸೇನೆ ನಡೆಸಿದ್ದ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಹೇಳಿದೆ.

ವಾಯುದಾಳಿಯಿಂದ ಯಾವುದೇ ಉಗ್ರರು ಸತ್ತಿಲ್ಲ. ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪ್ರತಿಪಾದಿಸಿರುವ ಪಾಕಿಸ್ತಾನ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದೆ.

ವಾಯುದಾಳಿಯಲ್ಲಿ ಜೈಶ್ ಉಗ್ರ ಸಂಘಟನೆಯ ಕ್ಯಾಂಪ್ ಗಳು ಧ್ವಂಸವಾಗಿದ್ದವು ಎಂದು ಭಾರತ ಸರ್ಕಾರ ಹೇಳಿತ್ತು. ಈ  ಕುರಿತ ಸತ್ಯ ದರ್ಶನಕ್ಕಾಗಿ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಗೆ ಕರೆದುಕೊಂಡು ಹೋಗಲು ತಾನು ಸಿದ್ಧ ಎಂದು ಪಾಕ್ ಸೇನಾ ವಕ್ತಾರ ಗಫೂರ್ ಹೇಳಿದ್ದಾರೆ.  

Share Post

Leave a Reply

Your email address will not be published. Required fields are marked *

error: Content is protected !!