ಬರಗಾಲದಿಂದ ಮೇವಿಗಾಗಿ ಅಲೆದಾಟ- ವಿಷಾಹಾರ ಸೇವಿಸಿ 11 ಮೇಕೆಗಳ ಮಾರಣಹೋಮ

ಬರದನಾಡು ಎಂಬ ಹಣೆಪಟ್ಟಿ ಮಾತ್ರವಲ್ಲದೆ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಚಿತ್ರದುರ್ಗ.ಇಲ್ಲಿ ಭೀಕರ ಬರಗಾಲ ವಿದ್ದು ಮೂಕ ಪ್ರಾಣಿಗಳು ಮೇವಿಗಾಗಿ ಪರದಾಡುತ್ತಿವೆ. ಚಳ್ಳಕೆರೆ ತಾಲ್ಲೂಕಿನ ಕಾಪರಹಳ್ಳಿ ಗ್ರಾಮದಲ್ಲಿ ಹುಲಿಕುಂಟೆ ಭದ್ರಪ್ಪ ಎನ್ನುವವರಿಗೆ ಸೇರಿದ 11 ಮೇಕೆಗಳು ಸಾವನ್ನಪ್ಪಿವೆ. ಇಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದೆ.

ಭಾನುವಾರ ಆಡು ಮೇಯಿಸಲಿಕ್ಕೆ ಹೋದಾಗ ಯಾವುದೋ ವಿಷ ಆಹಾರ ಸೇವಿಸಿದ 5 ಮೇಕೆಗಳು ರಾತಿ ಮನೆಗೆ ಬಂದು ವಿಲ ವಿಲ ಒದ್ದಾಡಿ ಸಾವನ್ನಪ್ಪಿವೆ. ಇನ್ನುಳಿದ 6 ಮೇಕೆಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ.

Share Post

Leave a Reply

Your email address will not be published. Required fields are marked *

error: Content is protected !!