ಚಿತ್ರದುರ್ಗದಲ್ಲಿ ಕುಡಿಯೋ ನೀರಿಗೆ ಹಾಹಾಕಾರ – ಶಾಸಕ CEO ನಡುವೆ ಮಾತಿನ ಚಕಮಕಿ

ಚಿತ್ರದುರ್ಗ ಕ್ಷೇತ್ರದಲ್ಲಿ ಕುಡಿಯುವ ನೀರಿನ ವಿಚಾರವಾಗಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಹಾಗೂ ಸಿಇಓ ಸತ್ಯಭಾಮ ನಡುವೆ ಮಾತಿನ ಚಕಮಕಿ‌ ನಡೆದಿದೆ.  ಸೋಲ್ಲಾಪುರ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಬಳಿ ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆಗೆ ನಡೆಸಿದ್ರು. ಆಗ ಪ್ರತಿಭಟನಾಕಾರರ ಪರ ಶಾಸಕ ತಿಪ್ಪಾರೆಡ್ಡಿ ಜಿಲ್ಲಾ ಪಂಚಾಯತ್ ಗೆ ತೆರಳಿದ್ದರು. ಈ ವೇಳೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ  ಸಿಇಒ ಸತ್ಯಭಾಮ ವಿರುದ್ಧ ಕಿಡಿಕಾರಿದ್ರು. ಪಿಡಿಓಗಳನ್ನ ಕರೆಸಿ ಸಭೆ ಮಾಡಿ ಎಂದು ಶಾಸಕರು ಸಿಇಓಗೆ ತಾಕೀತು ಮಾಡಿದರು. ಆಗ ನಾನು ಭಾನುವಾರ ಕೂಡ ಕೆಲಸ ಮಾಡಿದ್ದೇನೆ‌ ಸರ್ ಎಂದು ಸಿಇಒ ಸತ್ಯಭಾಮ ತಿಳಿಸಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

Share Post

Leave a Reply

Your email address will not be published. Required fields are marked *

error: Content is protected !!