ಉಪಚುನಾವಣೆಗೆ ಕೈ ಅಭ್ಯರ್ಥಿಗಳ ಹೆಸರು ಫೈನಲ್

ಲೋಕಸಭೆ ಚುನಾವಣೆ ರಾಜ್ಯದಲ್ಲಿ ಮುಗಿಯುತ್ತಿದ್ದಂತೆ ವಿಧಾನಸಭೆ ಉಪಚುನಾವಣೆಯ ಕಾವು ಶುರುವಾಗಿದೆ. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಇದೀಗ ಮೈತ್ರಿ ಸರ್ಕಾರ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕುಸುಮಾವತಿ ಶಿವಳ್ಳಿ, ಕಲಬುರ್ಗಿ ಜಿಲ್ಲೆ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿಯಾಗಿ ಸುಭಾಷ್ ರಾಠೋಡ್​ ಅವ್ರನ್ನ ಕಣಕ್ಕೆ ಇಳಿಸಿದೆ. ಆದ್ರೆ ಚಿಂಚೋಳಿಯ ಕಾ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಲಬುರಗಿ ಜಿಲ್ಲೆಯಲ್ಲಿದ್ದರೂ ಬೀದರ್‌ ಲೋಕಸಭಾ ಚುನಾವಣಾ ವ್ಯಾಪ್ತಿಗೆ ಬರುವುದರಿಂದ ಈಶ್ವರ್‌ ಖಂಡ್ರೆ ತಮ್ಮ ಆಪ್ತ ಜೈಸಿಂಗ್‌ ರಾಠೊಡ್‌ ಅವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ ರಾಜ್ಯ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ ವ್ಯಕ್ತಿಗೆ ಟಿಕೆಟ್‌ ಕೊಡಲು ನಿರ್ಧರಿಸಿರುವುದರಿಂದ ಸುಭಾಸ್‌ ರಾಠೊಡ್‌ಗೆ ಅವಕಾಶ ದೊರೆತಿದೆ.

Share Post

Leave a Reply

Your email address will not be published. Required fields are marked *

error: Content is protected !!