ಚಿತ್ರದುರ್ಗದ ಕೋಟೆಯ ಹೊಂಡಕ್ಕೆ ಬಿದ್ದು ಮಹಿಳೆ ಸಾವು

ಚಿತ್ರದುರ್ಗದ ಗೋಪಾಲಸ್ವಾಮಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನ ಸುಮಿತ್ರಾ ಎಂದು ಗುರುತಿಸಲಾಗಿದೆ. ದಾವಣಗೆರೆ ತಾಲೂಕಿನ ಬೋಕಿಕೆರೆ ಗ್ರಾಮದವರಾದ ಸುಮಿತ್ರಾ, ದಿವ್ಯ, ಅಂಬುಜಮ್ಮ ಮತ್ತಿತರು ಕೋಟೆ ನೋಡಲು ಬಂದಿದ್ದಾರೆ. ಕೋಟೆಯ ಗೋಪಾಲ ಸ್ವಾಮಿ ಹೊಂಡದ ಹತ್ತಿರ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ  ಸುಮಿತ್ರಾ  ಸಾವನ್ನಪ್ಪಿದ್ದಾರೆ.

ಸುಮಿತ್ರಾ ಅವರು ನೀರಿಗೆ ಬೀಳುತ್ತಿದ್ದಂತೆಯೇ ಆಕೆಯನ್ನು ರಕ್ಷಿಸಲು ಅವರ ತಾಯಿ ಅಂಬುಜ ಮತ್ತು ಮಗಳು ದಿವ್ಯ ಪ್ರಯತ್ನಿಸಿ ನೀರಿಗಿಳಿದಿದ್ದಾರೆ. ಆದರೆ ಅವರ ಪ್ರಯತ್ನ ಫಲಿಸಲಿಲ್ಲ. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!