ಪ್ರಧಾನಿ ಮೋದಿಯ ಆಸ್ತಿ ಮೌಲ್ಯ ಎಷ್ಟು ಗೊತ್ತಾ…?

ಪ್ರಧಾನಿ ನರೇಂದ್ರ ಮೋದಿ ಆಸ್ತಿ ಘೋಷಣೆ ಮಾಡಿದ್ದಾರೆ.ಒಟ್ಟು 2,51, 36, 119 ರೂಪಾಯಿ ಆಸ್ತಿ ಹೊಂದಿರೋದಾಗಿ ಪ್ರಧಾನಿ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಮೋದಿ ತಮ್ಮ ಆಸ್ತಿ ವಿವರಗಳನ್ನೂ ಸಲ್ಲಿಸಿದ್ರ. ಚಿರಾಸ್ತಿ ಮತ್ತು ಚರಾಸ್ತಿ ಸೇರಿ ಒಟ್ಟು ₹2,51, 36, 119 ಆಸ್ತಿ ಹೊಂದಿದ್ದಾರೆ. ಆದ್ರೆ, ಯಾವುದೇ ಸಾಲವನ್ನು ಮಾತ್ರ ಮೋದಿ ಮಾಡಿಲ್ಲ.

2013/14 ರಲ್ಲಿ ಅವರ ಆದಾಯ 9,69,711 ರೂಪಾಯಿ ಇತ್ತು. 2014/15ರಲ್ಲಿ 8,58,780 ರೂಪಾಯಿ ಆದಾಯ ಇದ್ರೆ, 2015/16ರ ಆರ್ಥಿಕ ವರ್ಷದಲ್ಲಿ 19,23,160 ರೂಪಾಯಿ ಇತ್ತು. 2016/17ರ ಆರ್ಥಿಕ ವರ್ಷದಲ್ಲಿ 14,59,750 ರೂಪಾಯಿ ಇದ್ರೆ 2017/18 ರಲ್ಲಿ 19,92,520 ರೂಪಾಯಿ ವಾರ್ಷಿಕ ಆದಾಯ ಹೊಂದಿದ್ದಾರೆ.


ಪ್ರಧಾನಿ ಮೋದಿ ಕೈಯಲ್ಲಿ  38,750 ರೂಪಾಯಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾಂಧಿ ನಗರ ಶಾಖೆಯಲ್ಲಿ ಕೇವಲ 4143 ರೂಪಾಯಿಗಳನ್ನ ಇಟ್ಟಿದ್ದಾರೆ. ಇದಲ್ಲದೇ 1, 27, 81, 574 ರೂಪಾಯಿಗಳ ಎಫ್​ಡಿಎ ಹೊಂದಿದ್ದಾರೆ. ನ್ಯಾಷನ್ ಸೇವಿಂಗ್ಸ್​ ಸರ್ಟಿಫಿಕೇಟ್​ನಲ್ಲಿ 7,61,466 ರೂಪಾಯಿ ತೋರಿಸಿದ್ದಾರೆ. ಇನ್ನು 1,90374 ರೂಪಾಯಿ ಇನ್ಯುರೆನ್ಸ್​ ಪಾವತಿ ಮಾಡುತ್ತಿದ್ದಾರೆ. ಹಾಗೇ ಒಂದು ಬಂಗಾರದ ಉಂಗುರ ಕೂಡ ಇದ್ದು, ಅದು 45 ಗ್ರಾಂ ಇದೆ. ಅದರ ಮೌಲ್ಯ 1,13,800 ರೂಪಾಯಿ ಆಗಿದೆ.

ಮೋದಿಯ ಒಟ್ಟು ಚರಾಸ್ತಿಯ ಮೌಲ್ಯ 1, 41,36,119 ರೂಪಾಯಿ ಆಗಿದೆ.

ಗಾಂಧಿನಗರದಲ್ಲಿ ಮೋದಿ ಪ್ಲಾಟ್ ಒಂದನ್ನ ಹೊಂದಿದ್ದಾರೆ. ಅದರ ಮೌಲ್ಯ 1,10,00,000 ರೂಪಾಯಿ ಆಗಿದೆ.

Share Post

Leave a Reply

Your email address will not be published. Required fields are marked *

error: Content is protected !!