ಮುದ್ದಹನುಮೇಗೌಡ ಹಣ ಪಡೆದಿಲ್ಲ – ನಿಷ್ಟಾವಂತ ಸಂಸದ ಎಂದ ಪರಮೇಶ್ವರ್

ಮುದ್ದಹನುಮೇಗೌಡ ಹಣ ಪಡೆದಿದ್ದಾರೆ ಎನ್ನಲಾದ ಆಡಿಯೋ ಕುರಿತಂತೆ ಡಿಸಿಎಂ ಡಾ. ಜಿ.ಪರಮೇಶ್ವರ್​ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋ ಬಿಡುಗಡೆ ಬಗ್ಗೆ ನನಗೆ ಗೊತ್ತಿಲ್ಲ. ದರ್ಶನ್ ಮೇಲೆ ವಿರುದ್ಧ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ದರ್ಶನ್  ಚುನಾವಣೆ ಸಂದರ್ಭದಲ್ಲಿ ನನ್ನ ಜತೆ ಇದ್ದ. ದರ್ಶನ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ‌. ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ. ಅವರು ನಿಷ್ಠಾವಂತ ಕಾಂಗ್ರೆಸ್ ಸಂಸದ ಎಂದು ಹೇಳಿದ್ರು.  ರಮೇಶ್ ಜಾರಕಿಹೊಳಿ ಮನವೊಲಿಕೆಗೆ ನಾವು ಪ್ರಯತ್ನ ಮಾಡಿದ್ದೇವೆ. ಇದ್ರಿಂದ ಸರ್ಕಾರಕ್ಕೆ ಯಾವುದೇ ‌ತೊಂದರೆ ಇಲ್ಲ. ಸರ್ಕಾರ ಸುಭದ್ರವಾಗಿದೆ. ರಮೇಶ್ ಜಾರಕಿಹೊಳಿಗೆ ಜೆಡಿಎಸ್ ಆಫರ್ ನೀಡಿರೋದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!