ಆಡಿಯೋ ವೈರಲ್ ಆಗುತ್ತಿದ್ದಂತೆ ಕಂಗೆಟ್ಟ ಪರಂ ಆಪ್ತ

ತುಮಕೂರು ಪ್ರದೇಶ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಸಂಚಾಲಕ, ಪರಮೇಶ್ವರ್ ಆಪ್ತ ಆಡಿಯೋ ವೈರಲ್ ಆಗುತ್ತಿದ್ದಂತೆ ಕಂಗೆಟ್ಟಿದ್ದಾನೆ. ಮುದ್ದಹನುಮೇಗೌಡ ಹಾಗೂ ರಾಜಣ್ಣ ಹಣ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿರೋ ದರ್ಶನ್ ಕಾರ್ಯಕರ್ತರು ಹೀಗೆ ಮಾತನಾಡಿರಬಹುದಾ ಎಂದು ಗೆಳಯನ ಬಳಿ ಹೇಳಿದ್ದು ನಿಜ. ಆತ್ಮೀಯವಾಗಿ ಜನ ಏನು ಮಾತನಾಡಿಕೊಳ್ತಿದ್ದಾರೆ ಅನ್ನೋದನ್ನ ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾನೆ. ಇದೆಲ್ಲಾ ಸತ್ಯಕ್ಕೆ ದೂರವಾಗಿದ್ದು ಮುದ್ದಹನುಮೇಗೌಡರು ಮಾತನಾಡಿದ್ದಕ್ಕಿಂತ ಎತ್ತರದ ಸ್ಥಾನದಲ್ಲಿ ಇರೋರು ಅಂತ ಪ್ರತಿಕ್ರಿಯಿಸಿದ್ದಾನೆ. ಉದ್ದೇಶಪೂರ್ವಕವಾಗಿಯೇ ಅಡಿಯೋ ವೈರಲ್ ಮಾಡಲಾಗಿದೆ. ಪರಮೇಶ್ವರ್ ಸಿಎಂ ಆಗಬೇಕು ಎಂಬುದು ಎಲ್ಲರ‌ ಹಾಗೆ ನನ್ನ ಕನಸು ಆಗಿದ್ದು ಈ ವಿಚಾರವಾಗಿ ಗೆಳಯನೊಂದಿಗೆ ಮಾತನಾಡಿದ್ದೆ ಅಂತ ಸೆಲ್ಫಿ ವಿಡಿಯೋ ಮಾಡಿ ಸ್ಪಷ್ಟೀಕರಣ ನೀಡಿದ್ದಾನೆ. 

Share Post

Leave a Reply

Your email address will not be published. Required fields are marked *

error: Content is protected !!