ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರ್ ಗಳಿಗೆ ಎಸಿಬಿ ಶಾಕ್

 ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರಿ ಇಂಜಿನಿಯರ್​ಗಳ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ. ಏಕಕಾಲಕ್ಕೆ ಬೆಂಗಳೂರಿನ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜಯ್ ನಗರದಲ್ಲಿರುವ ಬಿಡಿಎ AEE ಕೃಷ್ಣಲಾಲ್ ನಿವಾಸ, ಗಾಂಧಿನಗರದ ಬಿಡಿಎ ಕಚೇರಿ ಹಾಗೂ ಮಹದೇವಪುರದ ಬಿಬಿಎಂಪಿ ಕಚೇರಿ ಮೇಲೆ ರೇಡ್​ ಮಾಡಲಾಗಿದೆ. ಬಿಡಿಎ, ಬಿಬಿಎಂಪಿ ನೀಡುವ ಟಿಡಿಆರ್ ಹಕ್ಕು ಪತ್ರದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರೋ ಆರೋಪ ಕೇಳಿಬಂದ ಹಿನ್ನೆಲೆ, ಎಸ್​ಪಿ ಸಂಜೀವ್ ಪಾಟೀಲ್ ಮತ್ತು ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮಹದೇವಪುರ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಯುಡಿಆರ್ ನೀಡುವ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದೆ. ಮಹದೇವಪುರ ವಲಯದಲ್ಲಿ ೨೦ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸಿದ್ರು.

Share Post

Leave a Reply

Your email address will not be published. Required fields are marked *

error: Content is protected !!