ದೇಶದ ಶ್ರೀಮಂತರಿಂದ ಬೆಂಕಿಯೊಂದಿಗೆ ಸರಸ –ಸುಪ್ರೀಂಕೋರ್ಟ್ ಪರೋಕ್ಷ ಅಸಮಾಧಾನ

ದೇಶದ ಶ್ರೀಮಂತರು ಮತ್ತು ಪ್ರಭಾವಿಗಳು ಬೆಂಕಿಯೊಂದಿಗೆ ಸರಸವಾಡುತ್ತಿದ್ದಾರೆ. ಅದು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಸಿಜೆಐ ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಅಸಮಾಧಾನವ್ಯಕ್ತಪಡಿಸಿದೆ.

‘ಕಳೆದ ಮೂರು ನಾಲ್ಕು ವರ್ಷದಿಂದ ಸಂಸ್ಥೆಯ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್  ವಿರುದ್ಧ ಮಾಡಿಲಾಗಿರುವ ಲೈಂಗಿಕ ದೌರ್ಜನ್ಯ ಆರೋಪ ವ್ಯವಸ್ಥಿತ ಪಿತೂರಿ ಎಂದು ಹೇಳಿದೆ.
‘ಪ್ರಭಾವಶಾಲಿ ಜನರನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ನ್ನು ಮುನ್ನಡೆಸಲು ಅವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ನ್ಯಾ.ಅರುಣ್​ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ದೇಶದ ಪ್ರಬಲ ವರ್ಗ, ಶ್ರೀಮಂತರು ಬೆಂಕಿಯೊಂದಿಗೆ ಸರಸವಾಡುತ್ತಿದ್ದಾರೆ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.
ಸಿಜೆಐ ಮೇಲೆ ಮಾಡಲಾಗಿರುವ ಲೈಂಗಿಕ ದೌರ್ಜನ್ಯ ಆರೋಪ ಒಂದು ಷಡ್ಯಂತ್ರ. ರಂಜನ್​ ಗೋಗೊಯ್​ ಮನೆ ಕಚೇರಿಯಲ್ಲೂ ಕೆಲಸ ಮಾಡಿದ್ದ  ಕೋರ್ಟ್ ನ ಮಾಜಿ ಸಿಬ್ಬಂದಿ ಮಾಡಿರುವ ಆರೋಪ ಪಿತೂರಿ ಎಂದು ವಕೀಲ ಉತ್ಸವ್ ಬೈನ್ಸ್ ಈ ಹಿಂದೆ​ ಹೇಳಿದ್ದರು.
ಬೈನ್ಸ್​ ಅನಿಲ್ ಅಂಬಾನಿಗೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪನ್ನು ತಿರುಚುವಂತೆ ಲಾಬಿ ಮಾಡಿದ್ದರು. ಆದರೆ, ಅದು ಸಾಧ್ಯವಾಗದಿದ್ದಾಗ ಸಿಜೆಐ ವಿರುದ್ಧ ಈ ಷಡ್ಯಂತ್ರ ಹೆಣೆಯಲಾಗಿದೆ. ಇದರಲ್ಲಿ ಕೋರ್ಟ್ ​ನ ಮಹಿಳಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ಹೇಳಿದ್ದರು. ಈ ಸಂಬಂಧ ಬೈನ್ಸ್​ ಅವರು ಮುಚ್ಚಿದ ಲಕೋಟೆಯಲ್ಲಿ ಸಾಕ್ಷ್ಯವನ್ನು ಪೀಠದ ಮುಂದೆ ಸಲ್ಲಿಕೆ ಮಾಡಿದ್ದರು.
Share Post

Leave a Reply

Your email address will not be published. Required fields are marked *

error: Content is protected !!