ಶ್ರೀಲಂಕಾ ಸ್ಫೋಟದ ಹಿಂದೆ ಮಹಿಳೆಯ ಕೈವಾಡ..!

ಶ್ರೀಲಂಕಾ ಸ್ಫೋಟದಿಂದ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಸರಣಿ ಬಾಂಬ್ ಸ್ಫೋಟ ಕೃತ್ಯದಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದಳು ಎನ್ನುವ ಸ್ಫೋಟಕ ವಿಚಾರ ಶ್ರೀಲಂಕಾ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಒಟ್ಟು 9 ಮಂದಿ ಕೃತ್ಯ ಎಸಗಿದ್ದು, ಈ ತಂಡದಲ್ಲಿ ಓರ್ವ ಮಹಿಳೆ ಭಾಗಿಯಾಗಿದ್ದಾಳೆ. ಈ ದಾಳಿ ಸಂಬಂಧ ಇಲ್ಲಿಯವರೆಗೆ 60 ಮಂದಿಯನ್ನು ಬಂಧಿಸಲಾಗಿದೆ.

ಓರ್ವ ಮಹಿಳೆ ಭಾಗಿಯಾಗಿರುವುದನ್ನು ಅಪರಾಧ ತನಿಖಾ ತಂಡ ಅಧಿಕೃತವಾಗಿ ತಿಳಿಸಿದೆ. ಬಂಧನಕ್ಕೆ ಒಳಗಾಗಿರುವ 60 ಮಂದಿಯಲ್ಲಿ 32 ಮಂದಿ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಬಂಧನಕ್ಕೆ ಒಳಗಾದ ಎಲ್ಲರೂ ಶ್ರೀಲಂಕಾದ ಪ್ರಜೆಗಳು. ಎಲ್ಲಾ ಆತ್ಮಹತ್ಯಾ ಬಾಂಬರ್‍ಗಳು ಸುಶಿಕ್ಷಿತರಾಗಿದ್ದು ಶ್ರೀಮಂತರಾಗಿದ್ದಾರೆ. ಓರ್ವ ಇಂಗ್ಲೆಂಡಿನಲ್ಲಿ ಪದವಿ ಪಡೆದಿದ್ದರೆ ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಓದಿದ್ದ. ಪ್ರಾಥಮಿಕ ತನಿಖೆಯ ವೇಳೆ ನ್ಯೂಜಿಲೆಂಡಿನ ಕ್ರೈಸ್ಟ್‍ಚರ್ಚ್ ಮಸೀದಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನುವುದು ತಿಳಿದು ಬಂದಿದೆ. ಒಟ್ಟು ಈ ದಾಳಿಯಲ್ಲಿ 359 ಮಂದಿ ಮೃತಪಟ್ಟಿದ್ದು ಇದರಲ್ಲಿ 39 ಮಂದಿ ವಿದೇಶಿಯರು ಸೇರಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!