ಜಾತ್ರೆ ನೋಡುತ್ತಿದ್ದಾಗ ಕುಸಿದು ಬಿದ್ದ ಸಜ್ಜೆ – 20ಕ್ಕೂ ಹೆಚ್ಚು ಭಕ್ತರಿಗೆ ಗಂಭೀರ ಗಾಯ

ಮನೆಯ ಸಜ್ಜೆ ಕುಸಿದು ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ  ಕುಣಿಗಲ್ ತಾಲ್ಲೂಕಿನ ಉಜ್ಜನಿ ಎಂಬ ಗ್ರಾಮದಲ್ಲಿ ಸಂಭವಿಸಿದೆ. ಐತಿಹಾಸಿಕ ಚೌಡೇಶ್ವರಿ ಜಾತ್ರಾ ಮೆರವಣಿಗೆ ವೇಳೆ ಈ ದುರಂತ ಸಂಭವಿಸಿದೆ. ಭಕ್ತರು ಮನೆಯೊಂದರ ಸಜ್ಜೆ ಮೇಲೇರಿ ಉತ್ಸವವನ್ನು ವೀಕ್ಷಿಸುತ್ತಿದ್ದ ವೇಳೆ ಭಾರ ಹೆಚ್ಚಾಗಿ ಸಜ್ಜೆ ಕುಸಿದು ಬಿದ್ದಿದ್ದು, ಸಜ್ಜೆ ಕೆಳಗಿದ್ದವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಬೆಂಗಳೂರು ಹಾಗೂ ಕುಣಿಗಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!