ಶ್ರೀಲಂಕಾ ಸ್ಫೋಟ ಪ್ರಕರಣ- ಪಾರ್ಥಿವ ಶರೀರ ಇಂದು ಮತ್ತು ನಾಳೆ ರಾಜ್ಯಕ್ಕೆ ಆಗಮನ

ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಸಂಬಂಧಿ ನಾಗರಾಜ ರೆಡ್ಡಿ ಪಾರ್ಥಿವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಗೃಹ ಸಚಿವ ಎಂಬಿ ಪಾಟೀಲ್​  ಸ್ಥಳದಲ್ಲಿದ್ದು ಅಂತಿಮ ದರ್ಶನ ಪಡೆದರು.
ನಾಗರಾಜ ರೆಡ್ಡಿ ಪಾರ್ಥಿವ ಶರೀರವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಲು ಕುಟುಂಬಸ್ಥರು ನಿರ್ಧರಿಸಿದ್ದು, ನಾಳೆ ಬೆಳಿಗ್ಗೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಬಿಟಿಎಂ ಲೇಔಟ್‌ನಲ್ಲಿರುವ ರೆಡ್ಡಿ ನಿವಾಸಕ್ಕೆ ಕೊಂಡ್ಯೊಯ್ಯಲು ನಿರ್ಧರಿಸಲಾಗಿದೆ. ಇನ್ನುಳಿದವರ ಮೃತದೇಹ ಇಂದು ಮತ್ತು ನಾಳೆ ಹಂತ ಹಂತವಾಗಿ ಶ್ರೀಲಂಕಾ ಏರ್ ಲೈನ್ಸ್ ಮೂಲಕ ಬರಲಿದೆ.

Share Post

Leave a Reply

Your email address will not be published. Required fields are marked *

error: Content is protected !!