ಕಾರಿನ ಸ್ಟೆಪ್ನಿಯಲ್ಲಿ ಹಣ ಸಾಗಾಟ- ಮಾಜಿ ಶಾಸಕ ಅಪ್ಪಾಜಿಗೌಡಗೆ ನೋಟಿಸ್

ಕಾರಿನ ಸ್ಟೆಪ್ನಿ ಚಕ್ರದಲ್ಲಿ ₹2.30 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಮಾಜಿ ಶಾಸಕ ಅಪ್ಪಾಜಿ ಗೌಡರಿಗೆ ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಏಪ್ರಿಲ್ 20 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಾಹನದ ಸ್ಟೆಪ್ನಿಯಲ್ಲಿ ಸಾಗಿಸುತ್ತಿದ್ದ 2,000 ರೂಪಾಯಿ ಮುಖ ಬೆಲೆಯ 2 ಕೋಟಿ 90 ಲಕ್ಷ ರೂಪಾಯಿ ಹಣ ಜಪ್ತಿ ಮಾಡಿದ್ದರು. ಈ ಸಂಬಂಧ ಕಾರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆ ಹಣ ಅಪ್ಪಾಜಿಗೌಡರಿಗೆ ಸೇರಿದ್ದುಅಂದಿದ್ದಾನೆ. ಚಾಲಕ ನೀಡಿರುವ ಮಾಹಿತಿ ಮೇರೆಗೆ ಮಾಜಿ ಶಾಸಕ ಅಪ್ಪಾಜಿಗೌಡರಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!