ಪತ್ನಿ ಸಮೇತ ಆಗಮಿಸಿ ಹಕ್ಕು ಚಲಾಯಿಸಿದ ಅಮಿತ್ ಶಾ

ಅಹ್ಮದಾಬಾದಿನ ನರನ್ ಪುರ ಉಪ- ವಲಯ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪತ್ನಿ ಸೊನಾಲ್  ಶಾ ಮತ ಚಲಾಯಿಸಿದ್ರು. ಬಳಿಕ ಮಾತನಾಡಿದ ಅಮಿತ್ ಶಾ, ನಿಮ್ಮ ಒಂದು ಮತದಿಂದ ರಾಷ್ಟ್ರದ ಭದ್ರತೆ, ಸದೃಢತೆ, ಅಭಿವೃದ್ಧಿ ಮಾಡಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಮತದಾರರ ಬಳಿ ಮನವಿ ಮಾಡಿದ್ರು. ರಾಜ್ಯಸಭೆ ಸದಸ್ಯರಾಗಿರುವ ಅಮಿತ್ ಶಾ, ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!