ವಿಜಯಪುರ ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್

ವಿಜಯಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್  ಮೈತ್ರಿ ಅಭ್ಯರ್ಥಿಗೆ ಐಟಿ‌ ಶಾಕ್ ನೀಡಿದೆ.  ಡಾ‌. ಸುನಿತಾ ಚವ್ಹಾಣ್ ಅವರ ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ನಡೆದಿದೆ. ನಾಗಠಾಣ ಜೆಡಿಎಸ್ ಶಾಸಕನ ಪತ್ನಿಯಾಗಿರುವ ಡಾ. ಸುನಿತಾ ಚವ್ಹಾಣ್ ಸಂಬಂಧಿ ರಾಮಚಂದ್ರ ದೊಡಮನಿ ಹಾಗೂ ಆಪ್ತ ದೇವಪ್ಪ ತದ್ದೇವಾಡಿ ಮನೆ ಮೇಲೆ ದಾಳಿ ನಡೆದಿದೆ.  ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಂಬಾ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳಿಗೆ ತಪಾಸಣೆ ವೇಳೆ ಅಂದಾಜು 12ಲಕ್ಷ ರೂಪಾಯಿ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ‌ ದೇವೇಗೌಡ ನಿನ್ನೆ ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಜಿಲ್ಲೆಯಿಂದ ಹೋದ ತಕ್ಷಣವೇ ದಾಳಿ ನಡೆದಿರೋದು ಆಶ್ಚರ್ಯ ಮೂಡಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!