ಬ್ರಿಟೀಷ್ ಪೌರತ್ವ ತಂದ ಸಂಕಷ್ಟ: ರಾಗಾ ನಾಮಪತ್ರ ಪರಿಶೀಲನೆ ಮುಂದೂಡಿಕೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರದ ಸಲ್ಲಿಕೆ ವೇಳೆ  ದಾಖಲಾಗಿದ್ದ ದಾಖಲೆಗಳಲ್ಲಿ ಕೆಲ ತಪ್ಪು ಮಾಹಿತಿ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆಯನ್ನ ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ. ಅಮೇಥಿ ಚುನಾವಣಾ ಅಧಿಕಾರಿ  ರಾಮ್ ಮನೋಹರ್ ಮಿಶ್ರಾ ನಾಮಪತ್ರ ಪರಿಶೀಲನೆ ಮುಂದೂಡಿ ಆದೇಶಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ರಾಹುಲ್  ದಾಖಲೆಗಳಲ್ಲಿ ಗೊಂದಲಗಳಿದೆ ಎಂದು ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ಯುಕೆ ಪ್ರಜೆಯಾಗಿದ್ದಾರೆ. ಅವರು ಯುಕೆನಲ್ಲಿ ಒಂದು ಕಂಪನಿಯನ್ನು ನೊಂದಾಯಿಸಿದ್ದು ಆ ಕಂಪನಿ ನೊಂದಾವಣೆ ಪ್ರಮಾಣಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಆದರೆ ಭಾರತೀಯ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಯಾವುದೇ ವಿದೇಶಿಗರು ವಿದೇಶೀ ಪ್ರಜೆ ಭಾರತೀಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು. “ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ನಾಗರಿಕರಾಗಿದ್ದಾರೆ? ಮತ್ತು ಈಗ ಅವರು ಭಾರತೀಯ ಪೌರತ್ವವನ್ನು ಹೇಗೆ ಪಡೆದರು? ಎಂದು ಲಾಲ್ ಪರ ವಕೀಲ ರವಿ ಪ್ರಕಾಶ್ ಹೇಳಿದ್ದಾರೆ. ಅಮೇಥಿಯಲ್ಲಿ ಮೇ 6 ರಂದು ಚುನಾವಣೆ ನಡೆಯಲಿದೆ. ಮೇ 23 ರಂದು ಮತಗಳ ಎಣಿಕೆ ನಡೆಯಲಿದೆ.

Share Post

Leave a Reply

Your email address will not be published. Required fields are marked *

error: Content is protected !!