ಪಾಂಡ್ಯ, ರಾಹುಲ್ ಗೆ ಬಿಸಿಸಿಐ ತಲಾ 20 ಲಕ್ಷ ರೂ. ದಂಡ

ಕರಣ್ ಜೋಹರ್ ಚಾಟ್  ಶೋ ನಲ್ಲಿ ಮಹಿಳೆಯರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ,  ಕೆ.ಎಲ್ ರಾಹುಲ್ ಗೆ ಬಿಸಿಸಿಐ ಒಟ್ಟಾರೆ ತಲಾ 20 ಲಕ್ಷ ದಂಡ ವಿಧಿಸಿದೆ. ಬಿಸಿಸಿಐ ಓಂಬುಡ್ಸ್ ಮನ್ ಈ ಆದೇಶ ಹೊರಡಿಸಿದೆ.  ಕರ್ತವ್ಯದಲ್ಲಿದ್ದಾಗ  ಹುತಾತ್ಮರಾದ 10 ಅರೆಸೇನಾ ಪಡೆ ಪೇದೆಗಳ ಕುಟುಂಬಕ್ಕೆ ಒಂದೊಂದು 1 ಲಕ್ಷ ನೀಡುವಂತೆ ಇಬ್ಬರಿಗೂ ಸೂಚನೆ ನೀಡಿದೆ. ಇನ್ನು 10 ಲಕ್ಷ ರೂಪಾಯಿಯನ್ನು ಅಂಧರ ಕ್ರಿಕೆಟ್ ಉತ್ತೇಜನಕ್ಕಾಗಿ ಪ್ರಾರಂಭಿಸಲಾಗಿರುವ ನಿಧಿಗೆ ನೀಡಬೇಕೆಂದು ಬಿಸಿಸಿಐ ಇಬ್ಬರೂ ಆಟಗಾರರಿಗೆ ಸೂಚಿಸಿದೆ. 4 ವಾರಗಳ ಒಳಗಾಗಿ ದಂಡ ಪಾವತಿ ಮಾಡುವುದಕ್ಕೆ ವಿಫಲವಾದರೆ, ಆಟಗಾರರ ಸಂಭಾವನೆಯನ್ನು ಕಡಿತಗೊಳಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. 

Share Post

Leave a Reply

Your email address will not be published. Required fields are marked *

error: Content is protected !!