ಗೋಡಂಬಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತೇ..? ಈ ಸ್ಟೋರಿ ನೋಡಿ

ಗೋಡಂಬಿ ತಿನ್ನುವುದರಿಂದ ಹಸಿವು ನೀಗಿಸಿಕೊಳ್ಳಬಹುದಷ್ಟೇ ಅಲ್ಲದೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಪ್ರಯೋಜನಗಳಿವೆ.ಗೋಡಂಬಿ ತಿನ್ನುವುದರಿಂದ ಆರೋಗ್ಯದ ಮೇಲೆ ಏನೇನು ಲಾಭವಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗೋಡಂಬಿ ಎಂದರೆ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ – ಅಜ್ಜಿಯಂದಿರೂ ಸಹ ತಿನ್ನಲು ಇಷ್ಟಪಡುತ್ತಾರೆ. ಈ ಗೋಡಂಬಿಯ ಮೂಲ ಬ್ರೆಜಿಲ್‌ನದ್ದಾಗಿದು, ಇದರಲ್ಲಿ ಖನಿಜ ಅಂಶ ಹೇರಳವಾಗಿದೆ.
ಗೋಡಂಬಿ ಮರಗಳಲ್ಲಿ ಇದರ ಹಣ್ಣು ನೇತಾಡುತ್ತಿರುತ್ತದೆ. ಹಣ್ಣಿನ ಕೆಳಭಾಗದಲ್ಲಿ ಗೋಡಂಬಿ ಇರುತ್ತದೆ. ವರ್ಷ ಪೂರ್ತಿ ಹಣ್ಣು ಹಾಗೂ ಗೋಡಂಬಿ ಲಭ್ಯವಿದ್ದು, ಇದರಿಂದ ಹಲವು ಲಾಭಗಳಿವೆ. ಗೋಡಂಬಿ ತಿಂದರೆ ಮನುಷ್ಯ ದಪ್ಪಗಾಗುತ್ತರೆಂದು ಹಲವರು ಹೇಳುತ್ತಾರಾದರೂ, ಇದರಿಂದ ಆರೋಗ್ಯದ ಮೇಲೆ ಅನೇಕ ಲಾಭಗಳೂ ಸಹ ಇದೆ.
ಸಹಾಯಕವಾದ ಫೈಬರ್‌ಗಳನ್ನು ಹೊಂದಿದೆ
ಗೋಡಂಬಿ ಅಥವಾ ಕ್ಯಾಶೀವ್ ನಟ್‌ಗಳಲ್ಲಿ ಆಹಾರದ ಫೈಬರ್ ಅಂಶ ಹೊಂದಿದ್ದು, ಇದನ್ನು ನಮ್ಮ ದೇಹ ಉತ್ಪಾದನೆ ಮಾಡದ ಕಾರಣ ಅದನ್ನು ಹೊರಗಿನಿಂದ ಸೇವಿಸಬೇಕಾಗುತ್ತದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆ ಮಾಡುತ್ತದೆ.
ಹೃದಯ ರೋಗವನ್ನು ನಿಯಂತ್ರಣದಲ್ಲಿಡುತ್ತದೆ
ಗೋಡಂಬಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಎಚ್‌ಡಿಎಲ್‌ ಕೊಲೆಸ್ಟರಾಲ್‌ ಒಯ್ಯುವ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಬರುವ ಅಪಾಯವನ್ನು ತಗ್ಗಿಸುತ್ತದೆ. ಆದರೆ, ಉಪ್ಪು ಅಂಶ ಹೆಚ್ಚಿರುವ ಅಥವಾ ಹುರಿದ ಗೋಡಂಬಿಯಲ್ಲದಂತೆ ನೋಡಿಕೊಳ್ಳಿ.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ
ಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇನ್ನು, ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆ
ಅದರಿಂದ ಹೆಚ್ಚು ಕಾಲ ಹೊಟ್ಟೆ ತುಂಬುವಂತೆಯೂ ನೋಡಿಕೊಳ್ಳುತ್ತದೆ.
ಕಣ್ಣಿಗೆ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ
ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನುತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ, ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು, ಇದರಿಂದ ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.
ನಿಮ್ಮ ಚರ್ಮಕ್ಕೆ ಒಳ್ಳೆಯದು
ಗೋಡಂಬಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಅಲ್ಲದೆ, ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿ ಆ್ಯಂಟಿಆಕ್ಸಿಡೆಂಟ್ಸ್‌ ಸಹ ಹೆಚ್ಚಿರುತ್ತದೆ.. ಅದರಿಂದ ನಿಮ್ಮ ಚರ್ಮಕ್ಕೆ ಒಳ್ಳೆಯದು. ಜತೆಗೆ, ಗೋಡಂಬಿ ತಿನ್ನುವುದಾಗಲೀ, ಗೋಡಂಬಿ ಎಣ್ಣೆಯನ್ನು ನೆತ್ತಿ ಮೇಲೆ ಹಚ್ಚಿಕೊಳ್ಳುವುದರಿಂದ ಚರ್ಮ ಹಾಗೂ ಕೂದಲಿಗೆ ಮೆಲಾನಿನ್ ಪಿಗ್ಮೆಂಟ್ ಉತ್ಪತ್ತಿಯಾಗಲು ನೆರವಾಗುತ್ತದೆ. ಇನ್ನೊಂದೆಡೆ, ಕೂದಲಿಗೆ ನಯವಾದ ವಿನ್ಯಾಸವನ್ನೂ ಇದು ನೀಡುತ್ತದೆ.

Share Post

Leave a Reply

Your email address will not be published. Required fields are marked *

error: Content is protected !!