ವಿದ್ಯಾರ್ಥಿನಿ ಮಧು ಕೊಲೆಯೋ…ಆತ್ಮಹತ್ಯೆಯೋ…?

ರಾಯಚೂರು ನಗರದ ಯುವತಿ ಮಧು ಪತ್ತಾರ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ.  ಮಧು ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಆಕೆಯನ್ನ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎನ್ನುವ ಆರೋಪಗಳು ಜೋರಾಗಿ ಕೇಳಿ ಬಂದಿವೆ.

ಇದಕ್ಕೆ  ಸಂಬಂಧಿಸಿದಂತೆ ಸೋಶಿಯಲ್​ ಮೀಡಿಯಾಗಳಲ್ಲಿ ಜಸ್ಟೀಸ್​ ಫಾರ್​ ಮಧು ಎಂಬ ಕೂಗು ಕೇಳಿ ಬರುತ್ತಿದೆ.

ಏಪ್ರಿಲ್ 13 ರಂದು ರಾಯಚೂರಿನ ನವೋದಯ ಇಂಜಿನಿಯರಿಂಗ್​ ಕಾಲೇಜಿನ ವಿದಾರ್ಥಿನಿ ನಾಪತ್ತೆ ಆಗಿದ್ದಳು, ಬಳಿಕ ಈಕೆಯ ಶವ ಕಳೆದ ಏಪ್ರಿಲ್​ 16 ರಂದು ಕಾಲೇಜಿನಿಂದ ಸುಮಾರು 4 ಕಿಲೋಮೀಟರ್​ ದೂರದಲ್ಲಿ ಪತ್ತೆಯಾಗಿತ್ತು. ನೆಲಕ್ಕೆ ತಾಗಿಕೊಂಡಂತೆ ನೇಣು ಬಿಗಿದ್ದಿದ್ದ ಮೃತದೇಹದಲ್ಲಿ ಸುಟ್ಟ ಗುರುತುಗಳಿದ್ದವು. ಆದರೆ, ಸ್ಥಳದಲ್ಲಿ ಮಧು ಬರೆದಿದ್ದಾಳೆ ಎನ್ನಲಾದ ಡೆತ್​ನೋಟ್ ಕೂಡ ಸಿಕ್ಕಿತ್ತು. ಈ ಮಧ್ಯೆ ಮಧುಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಪೋಷಕರ ದೂರಿನನ್ವಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನೇತಾಜಿ ನಗರ ಠಾಣೆ ಪೊಲೀಸರು ಆರೋಪಿ ಸುದರ್ಶನ ಯಾದವ್ ಎನ್ನುವ ಯುವಕನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ‌.

Share Post

Leave a Reply

Your email address will not be published. Required fields are marked *

error: Content is protected !!