ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್ ವಿಮಾನಗಳು !-16 ಸಾವಿರ ಉದ್ಯೋಗಿಗಳು ಬೀದಿಪಾಲು

ಜೆಟ್​ ಏರ್​ವೇಸ್​ ವಿಮಾನಗಳು ಇಂದು ರಾತ್ರಿಯಿಂದ  ಹಾರಾಟ ನಿಲ್ಲಿಸಲಿವೆ. ಸಂಸ್ಥೆಗೆ ತುರ್ತಾಗಿ ಬೇಕಿದ್ದ ₹ 400 ಕೋಟಿ ಸಾಲ ಲಭ್ಯವಾಗದೇ ಇರುವ ಕಾರಣ ಹಾರಾಟ ಸ್ಥಗಿತಗೊಳಿಸಲಿವೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಜೆಟ್​ ಏರ್​ವೇಸ್ ಸಂಸ್ಥೆ, ದೈನಂದಿನ ಕಾರ್ಯಾಚರಣೆಗೆ ತಕ್ಷಣಕ್ಕೆ ಭಾರೀ ಮೊತ್ತದ ಹಣಕಾಸು ನೆರವು ಬೇಕೆಂದು ಮನವಿ ಮಾಡಿಕೊಂಡಿತ್ತು. ಆದ್ರೆ ಕೇಂದ್ರ ಸರ್ಕಾರ ಸೇರಿದಂತೆ, ಯಾವುದೇ ಸರ್ಕಾರಿ ಬ್ಯಾಂಕುಗಳಾಗಲಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳು ಜೆಟ್​ ಏರ್​ವೇಸ್ ಸಂಸ್ಥೆಗೆ ನೆರವು ನೀಡುವುದಕ್ಕೆ ಹಿಂದೇಟು ಹಾಕಿದವು. ಹಾಗಾಗಿ ಇಂದು ರಾತ್ರಿಯಿಂದಲೇ ತನ್ನ ಯಾವುದೇ ವಿಮಾನ ಹಾರುವುದಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ. ಹಣಕಾಸು ಸಂಸ್ಥೆಗಳಿಂದ ಜೆಟ್​ ಏರ್​ವೇಸ್ ಸಂಸ್ಥೆ ಒಟ್ಟಾರೆಯಾಗಿ ₹ 1,500 ಕೋಟಿ ಸಾಲ ಬೇಡಿತ್ತು.
ನರೇಶ್​ ಗೋಯಲ್​ ಮಾಲೀಕತ್ವದ ಜೆಟ್​ ಏರ್​ವೇಸ್ ಸಂಸ್ಥೆಗೆ ಹಣಕಾಸು ನೆರವು ನೀಡುವ ಸಂಬಂಧ ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್​ ಸಿಂಗ್​ ಕರೋಲಾ ಇತ್ತೀಚೆಗೆ ಅನೇಕ ಸುತ್ತಿನ ಮಾತುಕತೆ ನಡೆಸಿದ್ದರು. ಒಂದು ವೇಳೆ ₹ 1,500 ಕೋಟಿ ಸಾಲಸೋಲ ನೀಡಿದರೂ ಅದು ಮತ್ತೆ ಸುಸ್ಥಿತಿಗೆ ಬರುವುದು ಕಷ್ಟವಾಗಿತ್ತು. ಸುಮಾರು 16 ಸಾವಿರ ಉದ್ಯೋಗಿಗಳು ಕೆಲಸವಿಲ್ಲದೆ ಈಗ ಅತಂತ್ರವಾಗಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!