ಸಿಂಹ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಮಹಿಳಾ ಆಯೋಗಕ್ಕೆ ದೂರು !

ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಮೈಸೂರು-ಕೊಡಗು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಪ್ರತಾಪ್ ಸಿಂಹ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿಯೋರ್ವಳು ಆರೋಪಿಸಿದ್ದಾಳೆ. ಈ ಬಗ್ಗೆ ಪ್ರತಾಪ್ ಸಿಂಹ ಅವರದ್ದು ಎನ್ನಲಾದ ವಾಟ್ಸ್ ಆ್ಯಪ್ ಚಾಟ್, ಆಡಿಯೊ ವೈರಲ್ ಆಗಿದೆ.
‘ಪ್ರತಾಪ್ ಸಿಂಹ ನನಗೆ ಸೇರಿದಂತೆ ಅನೇಕ ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಈತ ಒಳ್ಳೆಯವನ ರೀತಿ ನಟಿಸಿ ನಂತರ ಆತನ ಆಸೆ ಪೂರೈಸಿಕೊಂಡು ಕೈ ಬಿಡುತ್ತಾನೆ. ತಡರಾತ್ರಿಯಲ್ಲಿ ಫೋನ್ ಮಾಡುವುದು, ಕೆಟ್ಟದಾಗಿ ಮಾತನಾಡುವುದು ಮತ್ತು ಯುವತಿಯರ ದೇಹ ಸೌಂದರ್ಯವನ್ನು ವರ್ಣನೆ ಮಾಡುವುದು ಸೇರಿದಂತೆ ಅನೇಕ ರೀತಿಯಲ್ಲಿ ತೊಂದರೆ ನೀಡುತ್ತಿದ್ದ. ಇದರಿಂದ ಸಾಕಷ್ಟು ಬಾರಿ ನಾನು ಬೈದಿದ್ದೇನೆ’ ಎಂದು ಯುವತಿ ದೂರಿದ್ದಾಳೆ ಎಂದು ಹೇಳಲಾಗಿದೆ.
ಯುವತಿ ಮತ್ತು ಪ್ರತಾಪ್ ಸಿಂಹ ಜೊತೆಗಿರುವುದು ಎನ್ನಲಾದ ಫೋಟೊಗಳು ಮತ್ತು ಅವರಿಬ್ಬರ ನಡುವಿನ ಫೋನ್ ಸಂಭಾಷಣೆ ಎನ್ನಲಾದ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
Share Post

Leave a Reply

Your email address will not be published. Required fields are marked *

error: Content is protected !!