ದುಬಾರಿ ಪ್ರಯಾಣ ದರ ವಸೂಲಿಗೆ RTO ಬ್ರೇಕ್ ..!

ಮೊದಲ ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಚುನಾವಣಾ ಅಕ್ರಮಗಳನ್ನ ತಡೆಯಲು ಚುನಾವಣಾ ಆಯೋಗ  ಎಲ್ಲಾ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನಾಳೆ ಮಹಾವೀರ್​ ಜಯಂತಿಯ ರಜೆ ಇದ್ದು ನಗರದಲ್ಲಿ ನೆಲೆಸಿರುವ ಮತದಾರರು ಹಕ್ಕು ಚಲಾಯಿಸಲು ಒಂದು ದಿನ ಮುಂಚಿತವಾಗಿಯೇ ತಮ್ಮ ತಮ್ಮ ಊರುಗಳಿಗೆ ಹೊರಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್, ಹಾಗೂ ಕ್ಯಾಬ್ ಮಾಲೀಕರು ​ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ರು. ಈ ಹಿನ್ನೆಲೆಯಲ್ಲಿ ಆರ್​ಟಿಓ ಅಧಿಕಾರಿಗಳು ನಗರದ ಹಲವೆಡೆ ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚು ಹಣ ವಸೂಲಿ ಮಾಡುತ್ತಿರುವ ವಾಹನಗಳ ಹಾಗೂ ಅಕ್ರಮ ಸಾಗಾಣಿಕೆಯ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಸ್ವತಃ ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಆಯುಕ್ತರೇ ಕಾರ್ಯಾಚರಣೆಗೆ ಇಳಿದಿದ್ರು.

Share Post

Leave a Reply

Your email address will not be published. Required fields are marked *

error: Content is protected !!