ಸಕ್ಕರೆ ನಗರಿಯಲ್ಲಿ ಜೋಡೆತ್ತುಗಳ ಜೊತೆ ಸುಮಲತಾ ರೋಡ್ ಶೋ


ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ್ದರಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಬೃಹತ್ ರೋಡ್ ಶೋ ನಡೆಸಿದ್ರು. ರೋಡ್ ಶೋನಲ್ಲಿ ದರ್ಶನ್, ಯಶ್, ಸುನೀತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ರು. ಕಾಳಿಕಾಂಬ ದೇವಸ್ಥಾನದಿಂದ ರೋಡ್ಶೋ ಮೂಲಕ ಆಗಮಿಸಿ ಸಿಲ್ವರ್ ಜುಬ್ಲಿ ಮೈದಾನದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಸ್ವಾಭಿಮಾನಿ ಸಮ್ಮಿಲನಕ್ಕೆ ಜನ ಸಾಗರವೇ ಹರಿದು ಬಂದಿದೆ. ರ್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಭಾವಚಿತ್ರ ರಾರಾಜಿಸಿದ್ದು ವಿಶೇಷವಾಗಿತ್ತು.