ರಕ್ಷಣಾ ಸಚಿವರ ಸೌಜನ್ಯಕ್ಕೆ ಮಾರುಹೋದ ಶಶಿ ತರೂರ್ ..!

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​, ಸಂಸದ ಶಶಿ ತರೂರ್ ಆರೋಗ್ಯ ವಿಚಾರಿಸಿದ್ದಾರೆ. ತಿರುವನಂತಪುರಂನ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸುವ ವೇಳೆ  ಶಶಿ ತರೂರ್ ತಕ್ಕಡಿ ಕಳಚಿ ಬಿದ್ದು, ಗಾಯಗೊಂಡಿದ್ದರು. ತಿರುವನಂತಪುರಂನ ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ತರೂರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಭೇಟಿ ಬಗ್ಗೆ ಟ್ವೀಟ್​ ಮಾಡಿರೋ ತರೂರ್​, ನಿರ್ಮಲಾ ಸೀತಾರಾಮನ್​  ಸೌಜನ್ಯತೆ ನನ್ನ ಮನ ಮುಟ್ಟಿದೆ. ಕೇರಳದಲ್ಲಿ ಚುನಾವಣೆಯ ತೀವ್ರ ಒತ್ತಡದ ನಡುವೆಯೂ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರಾಜಕೀಯದಲ್ಲಿ ಸೌಜನ್ಯತೆ ಅನ್ನೋದು ತುಂಬಾ ಅಪರೂಪದ ಸದ್ಗುಣ ಎಂದು ಬರೆದುಕೊಂಡಿದ್ದಾರೆ. ನನ್ನ ತಲೆಗೆ 8 ಹೊಲಿಗೆಗಳನ್ನ ಹಾಕಲಾಗಿದೆ. ಸದ್ಯ ಅಬ್ಸರ್​ವೇಷನ್​​ನಲ್ಲಿ ಇದ್ದೇನೆ. ನಾನು ಆರಾಮಾಗಿದ್ದೀನಿ ಅಂತ ತರೂರ್ ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!