ಅಡ್ವಾಣಿಗೆ ಮುರಳಿ ಮನೋಹರ್ ಜೋಶಿ ಪತ್ರ ಬರೆದಿದ್ರಾ..? ಇಸಿಗೆ ಜೋಶಿ ದೂರು ನೀಡಿದ್ದು ಯಾಕೆ ?

ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿಗೆ, ಮುರಳಿ ಮನೋಹರ್​ ಜೋಷಿ ಬರೆದಿದ್ದಾರೆ ಎನ್ನಲಾದ ಫೇಕ್​​​ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 120 ಸೀಟ್​​ಗಳನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ ಪಕ್ಷ 8 ರಿಂದ 10 ಸೀಟ್​ಗಳನ್ನ ಗೆಲ್ಲಬಹುದು ಅಷ್ಟೇ. ನನಗೆ ಎಸ್ ಪಿ, ಬಿಎಸ್ ಪಿ ಸೇರಲು ಒತ್ತಾಯಿಸುತ್ತಿದ್ದಾರೆ. ಆದ್ರೆ ಮಾತೃ ಪಕ್ಷವನ್ನ ಬಿಟ್ಟು ಹೋಗಲು ಇಷ್ಚವಿಲ್ಲ.

” ಇಂದಿರಾ ಗಾಂಧಿ ಆಡಳಿತದ ಸಂದರ್ಭದಲ್ಲಿ ನೀವು ಹಾಗೂ ಅಟಲ್​​ ಬಿಹಾರಿ ವಾಜಪೇಯಿ ಸಂಕಷ್ಟಗಳ ನಡುವೆ ಪಕ್ಷವನ್ನ ಕಟ್ಟಿದ್ರಿ. ಆದ್ರೆ ಇಂದು ಮೌಲ್ಯಗಳನ್ನ ಗಾಳಿಗೆ ತೂರುತ್ತಿದ್ದಾರೆ” ಎಂದು ಬರೆದಿರುವ ಪತ್ರ ANI ವಾಟರ್​ಮಾರ್ಕ್​​ನೊಂದಿಗೆ ಹರಿದಾಡುತ್ತಿದೆ. ಇದು ಫೇಕ್​​​ ಎಂದು ಎಎನ್​​​ಐ ಈಗಾಗಲೇ ಸ್ಪಷ್ಟಪಡಿಸಿದೆ.

ಪತ್ರದ ಕುರಿತು ತನಿಖೆ ಮಾಡುವಂತೆ ಮರಳಿ ಮನೋಹರ್​ ಜೋಷಿ, ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!