ಮೇ 30ರೊಳಗೆ ದೇಣಿಗೆದಾರರ ವಿವರ ಸಲ್ಲಿಸಿ – ಸುಪ್ರೀಂ ಸೂಚನೆ

ದೇಣಿಗೆದಾರರ ವಿವರಗಳನ್ನ ಕೂಡಲೇ ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಂತಾ ಸುಪ್ರೀಂಕೋರ್ಟ್​, ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಚುನಾವಣಾ ಬಾಂಡ್​ ಸಂಬಂಧ ಮಧ್ಯಂತರ ತೀರ್ಪು ನೀಡಿರುವ ಸುಪ್ರೀಂಕೋರ್ಟ್​, ಮೇ 30ರೊಳಗೆ ಮುಚ್ಚಿದ ಲಕೋಟೆಯಲ್ಲಿ ದೇಣಿಗೆದಾರರ ವಿವರಗಳನ್ನ ನೀಡಬೇಕು. ಯಾವ್ಯಾವ ಪಕ್ಷಗಳು ಯಾರಿಂದ ಎಷ್ಟೆಷ್ಟು ದೇಣಿಗೆಗಳನ್ನ ಸಂಗ್ರಹಿಸಿವೆ ಎಂದು ವಿವರ ಸಲ್ಲಿಸಬೇಕು ಅಂತಾ ಸುಪ್ರೀಂಕೋರ್ಟ್​ ಹೇಳಿದೆ. ಚುನಾವಣಾ ಬಾಂಡ್​ ಸಂಬಂಧ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದವು. ಇದರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ನ್ಯಾಯಪೀಠ ​ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆರವು ನೀಡುವ ಚುನಾವಣಾ ಬಾಂಡ್ ಯೋಜನೆಯನ್ನ ಪ್ರಶ್ನಿಸಿ ಸಂಸ್ಥೆಯೊಂದು ಕೋರ್ಟ್​ ಮೆಟ್ಟಿಲೇರಿತ್ತು.

Share Post

Leave a Reply

Your email address will not be published. Required fields are marked *

error: Content is protected !!