ಆಂಧ್ರ ಹೊರತುಪಡಿಸಿ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತ – ತ್ರಿಪುರದಲ್ಲಿ ಅತಿ ಹೆಚ್ಚು ಮತದಾನ

ಆಂಧ್ರ ಹೊರತುಪಡಿಸಿ ಮೊದಲ ಹಂತದ ಮತದಾನ  ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ. ತ್ರಿಪುರದಲ್ಲಿ ಅತಿ ಹೆಚ್ಚು ಶೇ.81ರಷ್ಟು ಮತದಾನವಾಗಿದೆ.
18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 91 ಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ನಕ್ಸಲರ ಭಯದಿಂದಾಗಿ ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ ಮತದಾನವಾಗಿದೆ.
ಆಂಧ್ರ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಇಬ್ಬರು ಬಲಿಯಾಗಿದ್ದಾರೆ.  ಕೆಲವು ಕಡೆ ಸಣ್ಣಪುಟ್ಟ ಘರ್ಷಣೆ, ಮತದಾನ ಯಂತ್ರದಲ್ಲಿನ ತಾಂತ್ರಿಕ ತೊಂದರೆ, ಬೂತ್ ವಶೀಕರಣ ವಿಫಲ ಯತ್ನದಂತಹ ಘಟನೆಗಳು ನಡೆದಿವೆ.
Share Post

Leave a Reply

Your email address will not be published. Required fields are marked *

error: Content is protected !!