ಅತ್ಯಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆಗೆ ಪಶುವೈದ್ಯರ ಆಗ್ರಹ

ಕೋಲಾರ : ಹೈದರಾಬಾದ್ನಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಶು ವೈದ್ಯರ ಸಂಘದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ತೆಲಂಗಾಣ ರಾಜ್ಯದ ಹೈದರಾಬಾದಿನಲ್ಲಿ ಪ್ರಿಯಾಂಕಾ ರೆಡ್ಡಿ ಎಂಬ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ನಂತರ ಬೆಂಕಿ ಹಚ್ಚಿ ಸುಟ್ಟು ಕೊಂಡ ನಾಲ್ವರು ಬಂಧಿತ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಪಶು ವೈದ್ಯರ ಸಂಘ ಒತ್ತಾಯಿಸಿತು.

ನಗರದ ಪಶು ವೈದ್ಯ ಇಲಾಖೆ ಕಛೇರಿಯಿಂದ ನಗರದ ಮೆಕ್ಕೆ ವೃತ್ತದ ಮೂಲಕ ಮಹಾತ್ಮ ಗಾಂಧಿ ರಸ್ತೆಯವರೆಗೆ ಮೌನ ಪ್ರತಿಭಟನೆ ನಡೆಸಿದರು.
ಪ್ರಿಯಾಂಕ ರೆಡ್ಡಿ ಹತ್ಯೆಯ ಅರೋಪಿಗಳನ್ನು ಗಲ್ಲಿಗೇಸಿಬೇಕೆಂದು ಒತ್ತಾಯಿಸಿದರು. ಮೌನ ಪ್ರತಿಭಟನಾ ಜಾಥ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.