ರಮೇಶ್ ಜಾರಕಿಹೊಳಿ ಕೆರೆ ನೀರನ್ನು ಕೆರೆಗೆ ಚೆಲ್ಲುತಿದ್ದಾರೆ : ಸತೀಶ್ ಜಾರಕಿಹೊಳಿ

ಗೋಕಾಕ್ : ಉಪಚುನಾವಣೆಯ ಕದನದಲ್ಲಿ ಬಿಜೆಪಿ ಅಬ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ದ ಸಹೋದರ ಸತೀಶ್ ಜಾರಕಿಹೊಳಿ ಗೋಕಾಕ್ ತಾಲ್ಲೂಕಿನ ಕೊಣ್ಣೂರಲ್ಲಿ ಪ್ರಚಾರದ ವೇಳೆ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ರಮೇಶ್ ಬೆಂಬಲಿಗರು ಹಂಚುವ ಹಣ ಅವರದ್ದಲ್ಲ. ಅದು ನಿಮ್ಮದೆ ಹಣ. ಮನೆ ಮತ್ತು ಇನ್ನಿತರ ಕೆಲಸ ಮಾಡಿಸಿ ಕೊಡಿಸುವುದಾಗಿ ನಿಮ್ಮ ಹತ್ತಿರ ತೆಗೆದುಕೊಂಡ ಹಣವನ್ನು ತಿರುಗಿ ನಿಮಗೆಯೇ ಕೊಡುತಿದ್ದಾರೆ ಎಂದರು.

ಒಟ್ಟಾರೆ ಹೇಳುವುದಾದರೆ ಕೆರೆ ನೀರನ್ನು ಕೆರೆಗೆ ಚೆಲ್ಲುತಿದ್ದಾರೆ. ನಮಗೆ ದುಡ್ಡು ಬೇಡಾ ಕೆಲಸ ಬೇಕು. ಊರಿಗೆ ಒಂದು ಬಾರಿಯೂ ಬಾರದ ಶಾಸಕರು ಈಗ ಬರುತ್ತಿದ್ದಾರೆ. ಅವರು ಹಣ ಕೊಡುತ್ತಿದ್ದಾರೆ ಅಂತ ತಿಳಿದು ಬಿಜೆಪಿಗೆ ಮತ ನೀಡದೆ ವಿಚಾರಿಸಿ ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ವಿರುದ್ದ ವ್ಯಂಗವಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅಜ್ಜಪ್ಪ ಕರನಿಂಗ, ರಮೇಶ ಪೂಜೇರಿ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!