ಯಡಿಯೂರಪ್ಪ ಕೆಜೆಪಿ ಕಟ್ಟಬಹುದು, ನಾವು ಕಾಂಗ್ರೆಸ್ ಸೇರುವದು ತಪ್ಪೇ : ರಾಜು ಕಾಗೆ

ಕಾಗವಾಡ : ಯಡಿಯೂರಪ್ಪ ಅವರು ತಮಗೆ ಬೇಕಾದಾಗ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿಕೊಂಡು ಹೋಗಬಹುದು ಆದರೆ ನಾವುಗಳು ಕಾಂಗ್ರೆಸ್ ಸೇರುವುದು ತಪ್ಪೇ ಎಂದು ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಸಿಎಂ ಬಿಎಸ್‌ವೈ ಗೆ ಕುಟುಕಿದರು.

ಇಂದು ತಮ್ಮ ಮೊದಲ ಕಾರ್ಯಕರ್ತರ ಸಭೆಯನ್ನು ಆಯೋಜಿಸಿದ್ದು ಸಭೆಯಲ್ಲಿ ಪಾಲ್ಗೊಂಡು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರು ಹಿಂದಿನ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಅವರಿಗೆ ಹೊಟ್ಟೆ ಉರಿ ಪಡುತ್ತಾ ಸರ್ಕಾರ ಬೀಳಿಸುವ ಉದ್ದೇಶದಿಂದ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳನ್ನು ಒಡಿಸಿಕೊಂಡ ಹೋಗಿ ಅನರ್ಹಗೊಳ್ಳುವಂತೆ ಮಾಡಿದ್ದರು. ಅವರುಗಳಿಂದ ರಾಜೀನಾಮೆ ಕೊಡಿಸಿ ಮುಂಬಯಿಯಲ್ಲಿಟ್ಟುಕೊಳ್ಳುವ ಮೂಲಕ ಮುಖ್ಯಮಂತ್ರಿಯಾದರು ಎಂದು ಅವರು ಟೀಕಿಸಿದರು. ಈ ಉಪ ಚುನಾವಣೆ ನಡೆಯಲು ಬಿ.ಎಸ್.ಯಡಿಯೂರಪ್ಪ ನೇರ ಹೊಣೆ ಎಂದು ಅವರು ಹೇಳಿದರು.

ಅನರ್ಹರ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಕಾಗವಾಡ ಮತಕ್ಷೇತ್ರದಿಂದ ನನಗೆ ಟಿಕೆಟ್ ಕೊಡಿ ಎಂದು ಕೇಳಿದೆ. ನೀನು ಮತ್ತು ಲಕ್ಷ್ಮಣ ಸವದಿ ಮನೆಯಲ್ಲಿ ಕೂರಬೇಕು. ನಿಮಗೆ ಟಿಕೆಟ್ ಇಲ್ಲ. ನೀವಿಬ್ಬರೂ ಮೂರು ವರ್ಷ ಕಾಯಿರಿ, ಮುಂದೆ ನೋಡೋಣ ಎಂದು ಯಡಿಯೂರಪ್ಪ ಹೇಳಿದರು ಎಂದರು. ಅದಕ್ಕೆ ಪ್ರತಿಯಾಗಿ ನಾವೇನೂ ಕಿರಾಣಿ ಅಂಗಡಿ ಇಟ್ಟುಕೊಂಡು ಕೂರಬೇಕಾ ಎಂದು ಪ್ರಶ್ನಿಸಿದ್ದೆ ಎಂದು ಅವರು ಪಕ್ಷ ಬಿಡಲು ಕಾರಣವಾದ ಸನ್ನಿವೇಶ ನೆನಪಿಸಿಕೊಂಡರು.

ಅನರ್ಹ ಶಾಸಕ ಕಾಗವಾಡ ಕ್ಷೇತ್ರಕ್ಕೆ ಮೂರುನೂರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎನ್ನುತ್ತಿದ್ದಾರೆ. ಅಷ್ಟು ಅನುದಾನ ಕ್ಷೇತ್ರಕ್ಕೆ ತಂದಿದ್ದೆ ಆದರೆ ನಾನು ಚುನಾವಣೆಯಿಂದ ಹಿಂದೆ ಸರಿದು ಅವರ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಶ್ರೀಮಂತ ಪಾಟೀಲ್ ಗೆ ಟಾಂಗ್ ನೀಡಿದರು.

Share Post

Leave a Reply

Your email address will not be published. Required fields are marked *

error: Content is protected !!