ಬಿ.ಜೆ.ಪಿ ನೂತನ ಮಾಧ್ಯಮ ಸಂಚಾಲಕರ ನೇಮಕ

ಬೆಂಗಳೂರು : ಭಾರತೀಯ ಜನತಾ ಪಕ್ಷದ ನೂತನ ರಾಜ್ಯ ಮಾಧ್ಯಮ‌ ಸಂಚಾಲಕರನ್ನಾಗಿ ಎ.ಎಚ್.ಆನಂದ್‌ಕುಮಾರ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಇಲ್ಲಿಯವರೆಗೆ ಸಹ ವಕ್ತಾರರಾಗಿದ್ದ ಎ.ಎಚ್.ಆನಂದ್‌ರವರನ್ನು ಈಗಿನಿಂದಲೇ ಜಾರಿಗೆ ಬರುವಂತೆ ರಾಜ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ನೂತನ ಮಾಧ್ಯಮ ಸಂಚಾಲಕರನ್ನು ನೇಮಿಸಿ ಆದೇಶಿಸಿದ್ದಾರೆ. ಅಲ್ಲದೇ ನೀಡಿರುವ ಸ್ಥಾನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ.

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೊರಡಿಸಿದ ನೂತನ ರಾಜ್ಯ ಮಾಧ್ಯಮ ಸಂಚಾಲಕರ ನೇಮಕಾತಿ ಆದೇಶವನ್ನು ಮಾಧ್ಯಮ ವಿಭಾಗದ ಸಹ ಸಂಚಾಲಕ ಬಿ.ಎನ್.ರಾಘವೇಂದ್ರ ಅವರು ಪ್ರಕಟಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!