ಮತದಾರರ ಓಲೈಕೆಗೆ ವಾಚ್ ಹಂಚಿಕೆ : ಸಾರ್ವಜನಿಕರಿಂದಲೇ ಅಟ್ಯಾಕ್

ಕೋಲಾರ : ನಗರಸಭೆ ಚುನಾವಣೆ ರಂಗೇರಿದ್ದು ಮತದಾರರನ್ನು ಒಲಿಸಲು ಅಭ್ಯರ್ಥಿಗಳು ಅಡ್ಡ ದಾರಿ ತುಳಿಯುತ್ತಿರುವುದು ಕಂಡು ಬಂದಿದೆ.

ಅಡ್ಡ ದಾರಿಯಲ್ಲಿ ಮತದಾರರ ಓಲೈಕೆಗೆ ಸಾಕ್ಷಿಯಾಗಿ ವಾಚ್ ಹಂಚಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ನಡೆದಿದೆ.

ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿ ರಮೇಶ್ ಯಾದವ್ ಮತದಾರರಿಗೆ ವಾಚುಗಳನ್ನು ಹಂಚುವಾಗ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸುಮಾರು ಮುನ್ನೂರು ವಾಚುಗಳ ಹಂಚಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈಯ ಮಾರ್ವಾಡಿ ವ್ಯಾಪಾರಿಯಾಗಿದ್ದು ಇದೀಗ ಅಂದರ್ ಆಗಿದ್ದಾನೆ.

ನಗರದ ಕಾರಂಜಿಕಟ್ಟೆಯ 25 ನೇ ವಾರ್ಡಿನಲ್ಲಿ ಮಾರ್ವಾಡಿ ವ್ಯಾಪಾರಿಯಿಂದ ವಾಚುಗಳ ಹಂಚಿಕೆಯಾಗುತ್ತಿತ್ತು. ಈ ವೇಳೆ ಚುನಾವಣಾ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದು ಈತ ಜೆಡಿಎಸ್ ಅಭ್ಯರ್ಥಿ ರಮೇಶ್ ಯಾದವ್ ಅವರ ಬೆಂಬಲಿಗ ಎಂದು ತಿಳಿದು ಬಂದಿದೆ.

Share Post

Leave a Reply

Your email address will not be published. Required fields are marked *

error: Content is protected !!