ವೈದ್ಯರ ಪ್ರತಿಭಟನೆಯಲ್ಲೂ ಕಾರ್ಯನಿರ್ವಹಿಸಿದ ಒಪಿಡಿ

ಕಲಬುರಗಿ : ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಗೆ ಕರೆ ನೀಡಿದ ಹಿನ್ನೆಲೆ ಕಲಬುರ್ಗಿಯಲ್ಲಿ ಸಹ ಖಾಸಗಿ ಆಸ್ಪತ್ರೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿಕೊಂಡು ವೈದ್ಯರಿ ಪ್ರತಿಭಟಿಸಿದರು. ವೈದ್ಯರ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಬಹಳಷ್ಟು ಪ್ರಕರಣಗಳು ನಡೆದಿವೆ. ದೇಶದಾದ್ಯಂತ ವೈದ್ಯರಿಗೆ ಯಾವುದೆ ರಕ್ಷಣೆ ಇಲ್ಲಾ. ರಕ್ಷಣೆ ಇಲ್ಲದೆ ವೈದ್ಯರು ಮುಕ್ತವಾಗಿ ಜನಸೇವೆ ಮಾಡಲು ಸಾದ್ಯವಿಲ್ಲ. ಆದಕಾರಣ ಸರ್ಕಾರ ವೈದ್ಯರ ರಕ್ಷಣೆ ಕಡೆ ಗಮನಹರಿಸಿಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ರೋಗ ಹರಡಿರೋ ಹಿನ್ನೆಲೆಯಲ್ಲಿ ಓಪಿಡಿ ಬಂದ್ ಮಾಡಿಲ್ಲ. ರೋಗಿಗಳ ಹಿತದೃಷ್ಟಿಯಿಂದ ರೋಗಿಗಳಿಗೆ ತೊಂದರೆಯಾಗಬಾರದೆಂದು ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಿರುವುದಿಲ್ಲ ಎಂದು ಐ.ಎಂ.ಎ ಜಿಲ್ಲಾಧ್ಯಕ್ಷ ಅಮುಲ್ ಪತಂಗೆ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಎಂದಿನಂತೆ ಕಾರ್ಯನಿರ್ವಹಿಸಲಿದ್ದು ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!