ಸಾಲದ ಹೊರೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಕಲಬುರಗಿ : ಸಾಲದ ಹೊರೆಯಿಂದ ಬೇಸತ್ತು ಮೊತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಫಜಲಪೂರ ತಾಲ್ಲೂಕಿನ ಸಾಗನೂರ್ ಗ್ರಾಮದಲ್ಲಿ ನಡೆದಿದೆ.

ಬೈಲಪ್ಪ ಚಕ್ರ(51) ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾದ ರೈತ. ಈತ ಬಹಿರ್ದೆಸೆಗೆಂದು ಹೋಗಿ ಹೊಲದ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.

ಮೃತನು ಎಸ್‌ಬಿ‌ಎಚ್ ಬ್ಯಾಂಕ್ ಸಾಗನೂರ್ ಬ್ರ್ಯಾಂಚ್ ನಲ್ಲಿ ಸಾಲ ಪಡೆದಿದ್ದ ಅಲ್ಲದೆ ಖಾಸಗಿಯಾಗಿ ಕೂಡ ಸಾಲ ಪಡೆದಿದ್ದ ಎನ್ನಲಾಗಿದ್ದು ಸಾಲದ ಮೊತ್ತ ಸುಮಾರು 9 ಲಕ್ಷ ರೂ.ಸಾಲ ಆಗಿತ್ತು ಎನ್ನಲಾಗಿದೆ. ಸಲ ತೀರಿಸಲು ಆಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವಲಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share Post

Leave a Reply

Your email address will not be published. Required fields are marked *

error: Content is protected !!