ಫೋಟೋ ಪೂಜೆಗಷ್ಟೆ ಜಯಂತಿ ಸೀಮಿತವಾಗದೆ ಆದರ್ಶ ಪಾಲನೆಯಾಗಲಿ

ಬೆಳಗಾವಿ : ಜಿಲ್ಲೆಯ ಕಾಗವಾಡದ ತಹಶೀಲ್ದಾರ ಕಛೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನೆರವೇರಿಸಲಾಯಿತು.

ತಾಲ್ಲೂಕು ದಂಡಾಧಿಕಾರಿ ಪರಿಮಳಾ ದೇಶಪಾಂಡೆ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ನಾಯಕ ಸಮಾಜ ಮುಖಂಡ ಸಿದ್ದಪ್ಪ ನಾಯಕ ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿ ಪೊಟೋ ಪೂಜೆಗಷ್ಟೆ ಸೀಮಿತವಾಗಬಾರದು. ಅವರ ಆದರ್ಶಗಳು ಜನರಿಗೆ ತಲುಪುವ ಕಾರ್ಯವಾಗಬೇಕು. ಪೊಟೋ ಪೂಜೆ ಸಾಮಾನ್ಯವಾಗಿರುತ್ತದೆ‌. ಆದರೆ ನಾಯಕ ಜನ ಮುಂದುವರೆಯುವ ನಿಟ್ಟಿನಲ್ಲಿ ಜಾಗೃತವಾಗಬೇಕಾಗಿದೆ ಎಂದರು.

ಜನರು ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದುವರೆಯಬೇಕು. ಆಗ ಮಾತ್ರ ಈ ಜಯಂತಿಗೆ ಅರ್ಥ ಬರುತ್ತದೆ ಎಂದು ಅವತು ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ವಿಜಯ ಚೌಗಲಾ, ಮುಖಂಡರಾದ ಪರಶುರಾಮ ನಾಯಕ, ಸದಾಶಿವ ನಾಯಕ, ಸಚೀನ ಪೂಜಾರಿ, ಸಂದೀಪ ಬೀರಣಗಿ, ಪೀರಪ್ಪ ನಾಯಕ, ಅಪ್ಪಾಸಾಬ್ ಬೇರಡ ಮತ್ತಿತರರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!