ಕುಸಿದು ಬಿದ್ದ ವೃದ್ಧನ ಸಹಾಯಕ್ಕೆ ಧಾವಿಸಿ ಮಾನವೀಯತೆ ತೋರಿಸಿದ ಕಾನ್ಸ್‌ಟೇಬಲ್

ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ.‌ ಇದರ ಮಧ್ಯೆ ಸಂಚಾರಿ ಪೊಲೀಸ್ ಪೇದೆಯೊಬ್ಬರು ಮಾನವೀಯತೆಯನ್ನು ಮೆರೆಯುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಹೌದು, ನಗರದ ಸರ್.ಸಿದ್ದಪ್ಪ ಕಂಬಳಿ ವೃತ್ತದಲ್ಲಿ ವೃದ್ದರೊಬ್ಬರು ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್ ಕಾನ್ಸ್‌ಟೇಬಲ್ ವಿಜಯ್ ಬೆಟಗೇರಿ ವೃದ್ಧರ ಸಹಾಯಕ್ಕೆ ದಾವಿಸಿದ್ದಾರೆ. ಕುಸಿದು ಬಿದಿದ್ದ ವೃದ್ದನನ್ನು ಮೇಲಕ್ಕೆ ಎಬ್ಬಿಸಿ, ಒಂದು ಆಟೋ ನಿಲ್ಲಿಸಿ ಅವರ ಕೈ ಹಿಡಿದು ತಾವೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.‌

ಸಾರ್ವಜನಿಕರ ಜೊತೆ ಕೆಲ ಪೊಲೀಸರು ಅನುಚಿತವಾಗಿ ವರ್ತಿಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಈ‌ ಪೊಲೀಸ್ ಪೇದೆಯ ಮಾನವೀಯತೆಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ‌.

Share Post

Leave a Reply

Your email address will not be published. Required fields are marked *

error: Content is protected !!