ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು‌ ಸಾವು

ಹಾಸನ : ಕೊಳವೆ ಬಾವಿ ಕೊರೆಯುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರ ಮೃತಪಟ್ಟ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಗಾಂಧಿ ವೃತ್ತದ ಬಳಿ ನಡೆದಿದೆ.

ತಮಿಳುನಾಡು ಮೂಲದ ಪ್ರಭು(42) ಹಾಗೂ ಒರಿಸ್ಸಾ ಮೂಲದ ಕಿಲ್ಲೀಸ್(30) ಮೃತಪಟ್ಟ ಕಾರ್ಮಿಕರಾಗಿದ್ದು ಬೋರ್ವೆಲ್ ಲಾರಿ ನಿಂತಿದ್ದ ಸ್ಥಳದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ತಗುಲಿ ಈ ದುರ್ಘಟನೆ ಸಂಭವಿಸಿದೆ.

ಲಾರಿಯಿಂದ ಪೈಪ್ ಕೆಳಗಿಳಿಸುವಾಗ ವಿದ್ಯುತ್ ಲೈನ್‌ಗೆ ತಗುಲಿದ ಕಾರಣ ಈ ದುರ್ಘಟನೆ ನಡೆದಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ‌ ಶವಾಗಾರದಲ್ಲಿ ನಡೆಯಿತು.

ಘಟನೆ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕ್ರಮ ಜರುಗಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!