ಸುಮಲತಾ ಹೆಸರು ಹೇಳ್ಕೊಂಡು ರಾಜಕೀಯ ಮಾಡುವ ದುಃಸ್ಥಿತಿ ಬಂದಿಲ್ಲ

ಮಂಡ್ಯ : ತಮ್ಮ ಹೆಸರೇಳದಿದ್ರೆ ಕೆಲವರಿಗೆ ಮಾರ್ಕೆಟ್ ಕಡಿಮೆಯಾಗುತ್ತದೆ ಎಂಬ ಸಂಸದೆ ಸುಮಲತಾ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ನ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಸುಮಲತಾ ಹೆಸರೇಳಿಕೊಂಡು ರಾಜಕೀಯ ಮಾಡುವ ದುಃಸ್ಥಿತಿ ಬಂದಿಲ್ಲ ಎಂದು ತಿರುಗೇಟು ಕೊಟ್ಟರು.

ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಲತಾ ಅವ್ರು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ ಫಸ್ಟ್ಲಾಸ್ ಆಗಿ ರಾಜಕೀಯ ಮಾಡಿದ್ದೇವೆ. ರೈತರು ಸಮಸ್ಯೆ ಹೇಳಿಕೊಂಡಾಗ ಜನರ ಮುಂದೆ ವಿಚಾರ ಇಟ್ಟಿದ್ದೇನೆ.‌ ಸುಮಲತಾ ಅವರ ವೈಯಕ್ತಿಕ ವಿಚಾರ ಹೇಳಿಲ್ಲ. ಕ್ರಮ ತೆಗೆದುಕೊಳ್ಳಲಿ ಎಂದಿದ್ದೇನೆ. ಅದಕ್ಕೆ ಭಾಷಣ ಮಾಡಿ ಹೋಗ್ತಾರೆ ಎಂದಿದ್ದಾರೆ.

ಸುಮಲತಾ ಅವ್ರು ಬಾಷಣ ಮಾಡದೆ ಗುದ್ದಲಿ ತೆಗೆದುಕೊಂಡು ಹಗೆಯುತ್ತಿದ್ದಾರಾ? ಎಂದ ಅವರು, ಸುಮಲತಾ ಕೆ.ಆರ್.ಪೇಟೆಗೆ ಹೋದ್ರೆ ಬಿಜೆಪಿ ಜೊತೆ, ನಾಗಮಂಗಲಕ್ಕೆ ಬಂದ್ರೆ ಕಾಂಗ್ರೆಸ್ ಜೊತೆ ಹೋಗ್ತಾರೆ. ತಮ್ಮದು ಯಾವ ಪಾರ್ಟಿ ಎಂದು ತೀರ್ಮಾನ ಮಾಡಲಿ ಎಂದು ವ್ಯಂಗವಾಡಿದರು.

ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅವ್ರು ಸ್ವಾಭಿಮಾನದ ಹೆಸರಿನಲ್ಲಿ ಹೋರಾಡಿದ್ರು. ಈಗ ಸುಮಲತಾ ಅವ್ರು ಯಾರಿಗೆ ಎಷ್ಟೆಷ್ಟು ಪಾಲು ಕೊಡ್ತಾರೆ ನೋಡಬೇಕು. ಚುನಾವಣೆಯಲ್ಲಿ ಜೆಡಿಎಸ್ ನವರು ನನ್ನ ಪರ ಕೆಲಸ ಮಾಡಿದ್ದಾರೆ. ಕರೆದ್ರೆ ಜೆಡಿಎಸ್ ಕಚೇರಿಗೂ ಹೋಗುತ್ತೇನೆ ಎಂಬ ಸುಮಲತಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ವೋಟ್ ಹಾಕಿದ್ರೆ ಅವ್ರ ಮನೆಯಲ್ಲಿ ಹೋಗಿ ಊಟ ಮಾಡ್ಲಿ. ನಾವು ಜೆಡಿಎಸ್ ಕಚೇರಿಗೆ ಕರೆಯುವುದಿಲ್ಲ. ಅವ್ರನ್ನ ಕರೆದುಕೊಳ್ಳಲು ಕಾಯ್ದುಕುಳಿತಿರುವವರು ಕಾಂಗ್ರೆಸ್, ಬಿಜೆಪಿಯವರು ಎಂದ್ರು.

ಇನ್ನು ನಟರಾದ ದರ್ಶನ್, ಯಶ್ ನಟನೆ ಸಿನಿಮಾರಂಗಕ್ಕೆ ಸೀಮಿತವಾಗಿರಲಿ. ಸಿನಿಮಾದವರು ರಾಜಕೀಯಕ್ಕೆ ಬೇಡ. ಸಿನಿಮಾದವರ ಹಣೆಬರಹಗಳು ನನಗೆ ಗೊತ್ತಿದೆ ಎಂದು ಕುಟುಕಿದರು.

Share Post

Leave a Reply

Your email address will not be published. Required fields are marked *

error: Content is protected !!