ನಾಲ್ಕು ಬಾರಿ ಶಾಸಕನಾಗಿದ್ದವನಿಗೆ ಕಾಡಾ ಅಧ್ಯಕ್ಷನಾಗು ಎಂದರೆ ಸಾಧ್ಯವಿಲ್ಲ : ರಾಜು ಕಾಗೆ

ಕಾಗವಾಡ : ನಾಲ್ಕು ಬಾರಿ ಶಾಸಕನಾದವನಿಗೆ ಕಾಡಾ ಅಧ್ಯಕ್ಷನಾಗಲೂ ಸಾಧ್ಯವಿಲ್ಲ ಎಂದು ಮಾಜಿ ಶಾಸಕ‌ ರಾಜು ಕಾಗೆ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಉಗಾರ ಪಟ್ಟಣದ ತಮ್ಮ ಸ್ವಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು ಈಗಾಗಲೇ ಕಳೆದ ತಿಂಗಳಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದೇನೆ. ಒಂದು ವೇಳೆ ಬಿಜೆಪಿ ನಿಮಗೆ ಟಿಕೆಟ್ ನೀಡದಿದ್ದರೆ ನೀವು ಬೇರೆ‌ ಪಕ್ಷದಿಂದ ಸ್ಪರ್ಧೆ ಮಾಡಿ ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

ನಾನೂ‌ ಈಗಾಗಲೇ ನಮ್ಮ ವರಿಷ್ಠರಿಗೆ ಈ ವಿಚಾರ ತಿಳಿಸಿದ್ದೇನೆ. ಆದರೆ ಅವರು ನಮ್ಮ ಸರ್ಕಾರ ರಚನೆಗೆ ತ್ಯಾಗ ಮಾಡಿದ್ದಾರೆ ಎಂದು ಹೇಳಿದಾಗ ನಾನು ಅದಕ್ಕೆ ನನ್ನಿಂದ ಶ್ರೀಮಂತ ಪಾಟೀಲ ಅವರಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಡಾ ಖಂಡಿತವಾಗಿ ನಮ್ಮ ಬಿಜೆಪಿ ಮುಖಂಡರಿಗೆ ಹೇಳಿದ್ದೇನೆ ಎಂದು ಹೇಳಿದರು.

ನಾನು‌ ನಾಲ್ಕು ಬಾರಿ ಶಾಸಕನಾದವನು ನನಗೆ ಕಾಡಾ ಅಧ್ಯಕ್ಷನಾಗಲು ಸಾಧ್ಯವಿಲ್ಲ. ನನಗೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ಸ್ಪರ್ಧಿಸುವೆ. ಕೊಡದಿದ್ದರೆ ಮುಂದಿನ ವಿಚಾರಗಳನ್ನು ಹಾಗೂ ನಿರ್ಣಯಗಳನ್ನು ಘೋಷಣೆ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಸೇರ್ಪಡೆ ವಿಚಾರ ಇದೆ. ಆದರೆ, ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ವರಿಷ್ಠರು ನನ್ನನ್ನು ಮೂಲೆ ಗುಂಪು ಮಾಡಿದ್ದಾರೆ‌. ನನಗೆ ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ದರೆ ಬೇರೆ ಪಕ್ಷಕ್ಕೆ ಹೋಗಿ ಸ್ಪರ್ಧೆ ಮಾಡುತ್ತೇನೆ. ಅವರು ಸರ್ಕಾರ ರಚನೆಗೆ ತ್ಯಾಗ ಮಾಡಿದ್ದು ನಮಗೆ ಗೊತ್ತಿದೆ. ಆದರೆ ನಮಗೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾನು ಪಕ್ಷ ಸಂಘಟನೆಗೆ 20 ವರ್ಷ ದುಡದಿದ್ದೇನೆ ಹಾಗೂ ಬೆಳಸಿದ್ದೇನೆ. ನಿನ್ನೆ, ಮೊನ್ನೆ ಬಂದವರಿಗೆ ಪಕ್ಷದವರು ಮಣೆ ಹಾಕಿದ್ದಾರೆ. ನಾನು ಮತ್ತೊಮ್ಮೆ ನಾಯಕರ ಸಭೆ ಕರೆಸಿ ನನ್ನ ತೀರ್ಮಾನ ಹೇಳುತ್ತೇನೆ‌ ಎಂದು ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!