ಚಿಕ್ಕಮಗಳೂರು ದತ್ತಪೀಠ ಹಿಂದೂಗಳಿಗೆ ಒಪ್ಪಿಸಲು ಆಗ್ರಹಿಸಿ ಶ್ರೀರಾಮಸೇನಾ ಪ್ರತಿಭಟನೆ

ಕಲಬುರಗಿ : ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ದಲ್ಲಿರುವ ಶ್ರೀ ಗುರು ದತ್ತಾತ್ರೇಯರ ತಾಯಿ ಆರುಂಧತಿ ಅತ್ರಿ ಋಷಿಗಳ ಪವಿತ್ರ ಸ್ಥಳ ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ನಗರದಲ್ಲಿ ಶ್ರೀರಾಮಸೇನೆ ಪ್ರತಿಭಟನೆ ನಡೆಸಿತು.

ಹಿಂದೂಗಳ ಪವಿತ್ರ ಸ್ಥಳವನ್ನು ಆಕ್ರಮಿಸಿಕೊಂಡು ಬಾಬಾಬುಡನ್ ದರ್ಗಾ ಎಂದು ಹೇಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಶ್ರೀ ರಾಮ ಸೇನಾ ಜಿಲ್ಲಾ ಘಟಕ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಇತಿಹಾಸದ ಸತ್ಯಕ್ಕೆ ಬಗೆಯುವ ದ್ರೋಹವಾಗಿದೆ. ಬಾಬಾಬುಡನ್ ದರ್ಗಾ ನಾಗೇನಹಳ್ಳಿ ಯಲ್ಲಿದೆ. ಇದಕ್ಕೆ ಸರ್ಕಾರದ ದಾಖಲೆಗಳೇ ಸಾಕ್ಷಿಯಾಗಿದೆ. ಇನಾಂ ದತ್ತಾತ್ರೇಯ ಪೀಠ ಅನ್ನುವ ಸರಕಾರಿ ದಾಖಲೆಯಲ್ಲಿ ಇಂದಿಗೂ ಇದೆ. ಜೊತೆಗೆ ನ್ಯಾಯಾಲಯದ 7 ತೀರ್ಪುಗಳು ಇದಕ್ಕೆ ಪುಷ್ಠಿ ನೀಡಿದೆ. ಇಷ್ಟೆಲ್ಲ ದಾಖಲೆ, ತೀರ್ಪು, ಇತಿಹಾಸ ಇದ್ದರು ಹಿಂದು ಭಕ್ತರಿಗೆ ದ್ರೋಹ ಬಗೆದು, ಹಿಂದೂಗಳಿಗೆ ಈ ಪೀಠ ಒಪ್ಪಿಸದಿರುವುದು ಅತ್ಯಂತ ಖಂಡನಾರ್ಹವಾಗಿದೆ ಎಂದು ಕಿಡಿಕಾರಿದರು.

ಹಿಂದುಗಳ ತಾಳ್ಮೆ ಪರೀಕ್ಷಿಸದೆ ತಕ್ಷಣ ಈ ಪೀಠ ಹಿಂದುಗಳಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಅಖಿಲೇಶ್ ಒಡೆಯರ್, ಹಾಗೂ ಹಲವು ಸದಸ್ಯರು ಭಾಗಿಯಾಗಿದ್ದರು.

Share Post

Leave a Reply

Your email address will not be published. Required fields are marked *

error: Content is protected !!