ಮನೆ ಮಂಜೂರಾಗದ ಹಿನ್ನಲೆ ನೊಂದ ನೆರೆ ಸಂತ್ರಸ್ತ ವಿಷ ಸೇವಿಸಿ ಅಸ್ವಸ್ಥ

ಕಾಗವಾಡ : ಪ್ರವಾಹದಲ್ಲಿ ಮನೆ ಕಳದುಕೊಂಡಿದ್ದ ವ್ಯಕ್ತಿಯೋರ್ವ ನೆರೆ ಪರಿಹಾರದಲ್ಲಿ ಮನೆ ಮಂಜೂರಾಗದ ಹಿನ್ನೆಲೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಜುಗೂಳ ಗ್ರಾಮದ ರವಿ ಗುಣಕಿ(35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತೀವ್ರ ಅಸ್ವಸ್ಥನಾದ ಈತನನ್ನು ತಾಲ್ಲೂಕು ಶಿರಗುಪ್ಪಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ‌ ಚಿಕಿತ್ಸೆಗೆ ಮಹಾರಾಷ್ಟ್ರದ ಮಿರಜ್ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತ ರವಿ ಗುಣಕಿ, ಕೃಷ್ಣಾ ನದಿ ತೀರದಲ್ಲಿ ಇರುವ ಜುಗೂಳು ಗ್ರಾಮದ ನಿವಾಸಿಯಾಗಿದ್ದು ಮನೆ ಇಲ್ಲದೆ ಕಂಗಾಲಾಗಿದ್ದನು.

ಸಂತ್ರಸ್ತ ರವಿ ಹಾಗೂ ಪಂಚಾಯಿತಿ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದು ಇದರಿಂದ ಬೇಸತ್ತ ರವಿ ಜುಗೂಳ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥನಾಗಿದ್ದಾನೆ.

ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!