ಟ್ರಕ್ ಹರಿದು ಮೂವರು ದುರ್ಮರಣ : ಮೂವರಿಗೆ ಗಾಯ

ಕಾಗವಾಡ : ಪಟ್ಟಣದಲ್ಲಿ ನಿನ್ನೆ ತಡರಾತ್ರಿ ವಿಜೃಂಭಣೆಯ ದುರ್ಗಾಮಾತಾ ದೌಡ ಮೆರವಣಿಗೆ ಸಾಗುವ ವೇಳೆ ಹಿಂದಿನಿಂದ ಬಂದ ರಾಕ್ಷಸ ಟ್ರಕ್ ವೊಂದು ಜನರ ಮೇಲೆ ಎರಗಿದ್ದು ಸ್ಥಳದಲ್ಲಿಯೇ ಮೂವರು ಸಾವನಪ್ಪಿದ್ದು ಇನ್ನು ಮೂವರು ಗಾಯಗೊಂಡ ಘಟನೆ ನಡೆದಿದೆ.

ದುರ್ಗಾಮಾತಾ ವಿಸರ್ಜನೆ ಮಾಡಲು ಪಟ್ಟಣದ ಹೊರವಲಯದಲ್ಲಿ ಸಾಗುತ್ತಿದ್ದಾಗ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಸ್ಥಳದಲ್ಲೇ ಮೂವರು ಸಾವಿಗೀಡಾಗಿ ಮೂವರು ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಚೀನ ಪಾಟೀಲ್(ಜುಗುಳೆ)(30), ಸಂಜಯ್ ಪಾಟೀಲ್(40) ಹಾಗೂ 5 ವರ್ಷದ ಬಾಲಕ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.

ಕಾಗವಾಡ ಪೋಲಿಸರು ಸ್ಥಳಕ್ಕೆ ಭೆಡಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!