ಬೇಸಿಗೆಯಲ್ಲಿ ಎಳನೀರು ಅಮೃತವೇ ಸರಿ

ತೆಂಗಿನ ಮರವನ್ನ ಕಲ್ಪವೃಕ್ಷ ಅಂತ ಕರೆಯಲಾಗುತ್ತೆ. ಯಾಕಂದ್ರೆ ತೆಂಗಿನ ಮರದಿಂದ ಸಿಗೋ ಪ್ರತಿಯೊಂದು ವಸ್ತುವು ಬಳಕೆ ಮಾಡುವಂತದ್ದು. ನಮ್ಮ ಹಿರಿಯರು ಹೀಗಾಗಿನೇ ಮನೆ ಕಟ್ಟೋ ಮೊದಲು ಒಂದು ತೆಂಗಿನ ಗಿಡ ನೆಡುತ್ತಿದ್ರು.  ತೆಂಗಿನ ಮರದಿಂದ ಸಿಗೋ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನ ಒದಗಿಸುತ್ತೆ.  ಅದರಲ್ಲೂ ಬೇಸಿಗೆಯಲ್ಲಿ ಎಳನೀರು ಕುಡಿದ್ರೆ ಕ್ಷಣಾರ್ಧದಲ್ಲಿ ದಣಿವು ನಿವಾರಣೆಯಾಗುತ್ತೆ. ಎಳನೀರಿನಲ್ಲಿರೋ ವಿವಿಧ ಖನಿಜಾಂಶ, ಸಕ್ಕರೆ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿರೋದ್ರಿಂದ ಇದನ್ನ ಅಮೃತ ಅಂತಾನೇ ಕರೀತಾರೆ.
ಮೂತ್ರಪಿಂಡಗಳಲ್ಲಿರೋ ಕಲ್ಲನ್ನ ಕರಗಿಸೋ ಗುಣವನ್ನ ಎಳನೀರು ಹೊಂದಿದೆ.  ಕಿಡ್ನಿ ಸ್ಟೋನ್ ಇರುವವರು ಎಳನೀರನ್ನ ಹೆಚ್ಚಾಗಿ ಕುಡಿದ್ರೆ ಒಳ್ಳೇದು. ಜೀರ್ಣಕ್ರಿಯೆಗೂ ಎಳನೀರು ಸಹಾಯಕಾರಿಯಾಗಿದೆ. ಮಧುಮೇಹಿಗಳು ವೈದ್ಯರ ಸಲಹೆ ಮೇರೆಗೆ ನಿಯಮಿತ ಪ್ರಮಾಣದಲ್ಲಿ ಎಳನೀರು ಕುಡಿಯಬಹುದು. ರಕ್ತದೊತ್ತಡವನ್ನ ಕಡಿಮೆ ಮಾಡಲು, ಚರ್ಮದ ಕಾಂತಿ ಹೆಚ್ಚಿಸಲು , ಕೂದಲು ಉದುರುವುದನ್ನ ತಡೆಯೋ ಶಕ್ತಿಯೂ ಎಳನೀರಿಗಿದೆ. 
Share Post

Leave a Reply

Your email address will not be published. Required fields are marked *

error: Content is protected !!