ಜನ ತಪ್ಪಾಗಿ ಅರ್ಥೈಸಿಕೊಂಡು ಹಣ ಸಂಪಾದಿಸೋಕೆ ಅಂದುಕೊಂಡಿದ್ದಾರೆ: ಭಾಸ್ಕರ್ ರಾವ್

ಬೆಂಗಳೂರು: ಸಾರ್ವಜನಿಕರ ಮೇಲೆ ಟ್ರಾಫಿಕ್ ಪೊಲೀಸರ ಹಲ್ಲೆಯನ್ನ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿದ್ದಾರೆ.

ಟ್ರಾಫಿಕ್ ಪೊಲೀಸರ ಹಲ್ಲೆಯ ಬಗ್ಗೆ ಫೇಸ್​​ಬುಕ್​ನಲ್ಲಿ ಭಾಸ್ಕರ್ ರಾವ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಯನ್ನ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಅರ್ಥಮಾಡಿಕೊಳ್ಳಬೇಕಾದ ವಿಷಯಗಳಿವೆ. ಸಂಚಾರಿ ಪೊಲೀಸರು ಹಗಲು ರಾತ್ರಿ ಅನ್ನದೇ ಕೆಲಸ ಮಾಡುತ್ತಾರೆ. ಹೀಗಾಗಿ ಜನ ನಿಯಮ ಉಲ್ಲಂಘಿಸಿದರೆ ಸಹಜವಾಗಿ ಪೊಲೀಸರು ದರ್ಪ ತೋರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರು ಪೊಲೀಸರ ಸ್ಥಿತಿಯನ್ನೂ ಕೂಡ ಅರ್ಥ ಮಾಡಿಕೊಳ್ಳಬೇಕು. ಅವರು ಹಾಗೆ ಮಾಡುತ್ತಾರೆ ಎಂದು ಅದನ್ನ ವಿಡಿಯೋ ಮಾಡಿ ವೈರಲ್ ಮಾಡುವುದಲ್ಲ. ಆ ರೀತಿ ವಿಡಿಯೋ ಮಾಡುವ ಮುನ್ನ ಯೋಚಿಸಿ. ಟ್ರಾಫಿಕ್ ಪೊಲೀಸ್ರು ಕೂಡ ಮನುಷ್ಯರೇ. ಜನರಲ್ಲಿ ಜಾಗೃತಿ ಮೂಡಿಸಲು ಟ್ರಾಫಿಕ್ ಪೊಲೀಸರು ಈ ರೀತಿ ಕಟ್ಟು ನಿಟ್ಟಾಗಿ ವರ್ತಿಸ್ತಿದ್ದಾರೆ. ಆದ್ರೆ ಇದನ್ನ ಜನ ತಪ್ಪಾಗಿ ಅರ್ಥೈಸಿಕೊಂಡು ಹಣ ಸಂಪಾದಿಸೋಕೆ ಅಂದುಕೊಂಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.

ಜನರು ಮೊದಲು ಟ್ರಾಫಿಕ್ ನಿಯಮ ಪಾಲಿಸಿದ್ರೆ ಪೊಲೀಸರಿಗೂ ಕೆಲಸ ಕಡಿಮೆಯಾಗುತ್ತೆ. ಪೊಲೀಸರು ತಾಳ್ಮೆ ಕಳೆದುಕೊಳ್ಳದಂತೆ ಜನ ಕೂಡ ವರ್ತಿಸಬೇಕು. ಹಾಗೆಯೇ ಪೊಲೀಸರು ಕೂಡ ಅವಾಚ್ಯ ಶಬ್ದದಿಂದ ಬೈಯ್ಯಬಾರದು ಅಂತ ಭಾಸ್ಕರ್​ ರಾವ್​ ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!