ನಾಳೆಯೇ BBMP ಮೇಯರ್, ಉಪಮೇಯರ್ ಚುನಾವಣೆ..!

ಬೆಂಗಳೂರು: ನಿಗದಿಯಂತೆ ನಾಳೆಯೇ ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದೆ ಅಂತಾ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

ಈಗಾಗಲೇ ಮೇಯರ್ ಹಾಗೂ ಉಪಮೇಯರ್ ಅವಧಿ ಮುಗಿದಿದೆ. ಆದ್ದರಿಂದ ಚುನಾವಣೆ ನಡೆಸಲೇಬೇಕು ಅಂತಾ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ತಿಳಿಸಿದ್ದಾರೆ. ನಾಳೆ ಮೇಯರ್, ಉಪಮೇಯರ್ ಹಾಗೂ 4 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸುವ ಅನಿವಾರ್ಯತೆಯ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಹೇಳಿದ್ದೇವೆ. ಅದರಂತೆ ನಾಳೆ ಬೆಳಿಗ್ಗೆ ಎಂದಿನಂತೆ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ ಅಂತಾ ಹರ್ಷಗುಪ್ತ ತಿಳಿಸಿದ್ರು.

ಇನ್ನು, ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಹೀಗಾಗಿ BBMP ಮೇಯರ್ ಹಾಗೂ ಉಪಮೇಯರ್ ಚುನಾವಣೆಯನ್ನು ಮುಂದೂಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ರು.

Share Post

Leave a Reply

Your email address will not be published. Required fields are marked *

error: Content is protected !!