ಮತಾಂತರ ವಿರೋಧಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ

ದೆಹಲಿ: ತ್ರಿವಳಿ ತಲಾಖ್ ಹಾಗೂ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಆರ್ಟಿಕಲ್​ 370 ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಮಹತ್ವದ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಮತಾಂತರ ವಿರೋಧಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆಯಂತೆ. ಈ ನಿಟ್ಟಿನಲ್ಲಿ ಬಿಜೆಪಿಯ ಚಿಂತಕರ ಚಾವಡಿಯಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಮುಂಬರುವ ಲೋಕಸಭೆ ಅಧಿವೇಶದಲ್ಲಿ ಮಸೂದೆಯನ್ನ ಮಂಡಿಸಲು ಆರಂಭಿಕ ತಯಾರಿಗಳು ನಡೆದಿವೆ.

ಪ್ರಧಾನಿ ಮೋದಿಗೆ ಪತ್ರ..!

ಮೋದಿ ಸರ್ಕಾರದ ಮೊದಲನೇ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ, ಪ್ರಸ್ತುತ ಉಪ ರಾಷ್ಟ್ರಪತಿ ಆಗಿರುವ ವೆಂಕಯ್ಯ ನಾಯ್ಡು ಎಲ್ಲಾ ಪಕ್ಷಗಳಿಗೂ ಮತಾಂತರದ ಬಗ್ಗೆ ಕಾನೂನು ರೂಪಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ರು. ಆದ್ರೆ, ಆ ಬಳಿಕ ಈ ಸಂಬಂಧ ಹೆಚ್ಚಿನ ಬೆಳವಣಿಗೆಗಳು ನಡೆದಿರಲಿಲ್ಲ.

ಇನ್ನು ಈ ಸಂಬಂಧ ಬಿಜೆಪಿ ಮುಖಂಡ ಮತ್ತು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಮತಾಂತರ ವಿರೋಧಿ ಕಾನೂನು ಜಾರಿಗಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಸ್ತಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಕೂಡ ಬರೆದಿದ್ದರು. ಪತ್ರದಲ್ಲಿ ಕೆಲವು ರಾಜ್ಯಗಳು ಮತಾಂತರ-ವಿರೋಧಿ ಮತ್ತು ಮೂಢನಂಬಿಕೆ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ. ಆದ್ರೆ, ಈ ಕಾನೂನುಗಳು ಬಹಳ ದುರ್ಬಲವಾಗಿವೆ. ದುರಂತ ಅಂದ್ರೆ, ಈ ಕಾನೂನು ಜಾರಿಯಲ್ಲಿದ್ರೂ ಕೂಡ ಯಾರಿಗೂ ಶಿಕ್ಷೆಯಾಗಿಲ್ಲ. ಹೀಗಾಗಿ ಈ ಸಂಬಂಧ ಕಠಿಣ ಕಾನೂನನ್ನ ರೂಪಿಸುವಂತೆ ಮನವಿ ಮಾಡಿದ್ದರು.

Share Post

Leave a Reply

Your email address will not be published. Required fields are marked *

error: Content is protected !!