ಅನರ್ಹರ ವಿಚಾರದಲ್ಲಿ ಸಾಂವಿಧಾನಿಕ, ರಾಜಕೀಯ ಗೊಂದಲವಿದೆ : ಬಸವರಾಜ್ ಬೊಮ್ಮಾಯಿ

ಕಲಬುರಗಿ : ಇಂದು ಸುಪ್ರಿಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದೆ. ಇಲ್ಲಿ ಸಾಂವಿಧಾನಿಕ ಮತ್ತು ರಾಜಕೀಯ ಗೊಂದಲ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು
ಸ್ಪಿಕರ್ ಅವರ ತೀರ್ಪಿನ ಪ್ರಕಾರ ಅನರ್ಹ ಶಾಸಕರಿಗೆ ಸ್ಪರ್ಧೆ ಮಾಡಲು ಆಗುವುದಿಲ್ಲ. ಅರ್ಜಿ ವಿಚಾರಣೆಯ ಮುನ್ನವೇ ಚುನಾವಣೆ ಘೋಷಣೆ ಆಗಿದೆ. ಹೀಗಾಗಿ ಕಾನೂನು ಪ್ರಕ್ರಿಯೆ ಏನಾಗುತ್ತೆ ಅಂತಾ ಕಾದು ನೋಡೊಣ ಎಂದರು.
ಅನರ್ಹರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಅನ್ನುವುದರ ನಿರ್ಧಾರ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.